God ದೇವರ ಕೆಲಸ ಶ್ರದ್ಧಾ ಭಕ್ತಿಯಿಂದ ಕೂಡಿರಲಿ

ಸಿದ್ದಾಪುರ ತಾಲೂಕಿನ ಶ್ರೀಕ್ಷೇತ್ರ ಶಿಗ್ರಮನೆಯ ಶ್ರೀ ಗುರುಬ್ರಹಸ್ಪತಿ ಮಠದಲ್ಲಿ ಅಡಿಕೆ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಅಭಯಯಜ್ಞ ನಡೆಯಿತು. god
ಸಿದ್ದಾಪುರ ತಾಲೂಕಿನ ಶ್ರೀಕ್ಷೇತ್ರ ಶಿಗ್ರಮನೆಯ ಶ್ರೀ ಗುರುಬ್ರಹಸ್ಪತಿ ಮಠದಲ್ಲಿ ಅಡಿಕೆ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಅಭಯಯಜ್ಞ ನಡೆಯಿತು. god
Published on
ಸಿದ್ದಾಪುರ: ದೇವರ God ಕೆಲಸ ಕಾರ್ಯಗಳನ್ನು ಶ್ರದ್ಧಾ ಹಾಗೂ ಭಕ್ತಿಯಿಂದ ಮಾಡಬೇಕು. ನಿಷ್ಠಯಿಂದ ಭಗವಂತನ ಸೇವೆ ಮಾಡಿದರೆ ದೇವರು ಆಶೀರ್ವಾದ ಮಾಡುತ್ತಾನೆ ಎಂದು ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿ ರಾಮಪ್ಪನವರು ಹೇಳಿದರು.
ತಾಲೂಕಿನ ಶ್ರೀಕ್ಷೇತ್ರ ಶಿಗ್ರಮನೆಯ ಶ್ರೀ ಗುರುಬ್ರಹಸ್ಪತಿ ಮಠದಲ್ಲಿ ಅಡಿಕೆ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ನಡೆದ ಅಭಯಯಜ್ಞ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಪೂಜಾ ವಿಧಾನಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇಂತಹ ಹೋಮಗಳಿಂದ ರೋಗಗಳು ನಿಯಂತ್ರಣವಾಗಿ ರೈತರು ನೆಮ್ಮದಿಯಿಂದ ಜೀವನ ಸಾಗಿಸುವಂತೆ ಭಗವಂತ ಆಶೀರ್ವದಿಸಲಿ ಎಂದರು.
ಬೇಡ್ಕಣಿ ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ. ಎನ್. ನಾಯ್ಕ ಮಾತನಾಡಿದರು.ದೇವಾಲಯದ ಅಧ್ಯಕ್ಷ ಮಂಜುನಾಥ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಸಾಮಾಜಿಕ ಮುಖಂಡ ದಿವಾಕರ ನಾಯ್ಕ ಹೆಮ್ಮನಬೈಲ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ, ವಿ. ವಿಶ್ವನಾಥ ಭಟ್ ಗೋಳಿಕೈ, ಡಿ.ಕೆ. ನಾಯ್ಕ, ತೆಂಗಿನಮನೆ, ಸಿ. ಆರ್. ನಾಯ್ಕ, ಬೇಡ್ಕಣಿ ಸೊಸೈಟಿ ಅಧ್ಯಕ್ಷ ಪ್ರಶಾಂತ ನಾಯ್ಕ ಕುಂಬ್ರಿಗದ್ದೆ, ಸ್ಕೋಡ್‌ವೆಸ್ ಸಂಸ್ಥೆ ಅಧ್ಯಕ್ಷ ವೆಂಕಟೇಶ ನಾಯ್ಕ, ಇತರರಿದ್ದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ರಾಮಕೃಷ್ಣ ನಾಯ್ಕ ವಂದಾನೆ ಸ್ವಾಗತಿಸಿದರು. ಗುರು ನಾಯ್ಕ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net