ಆಡಳಿತ ಮಂಡಳಿ ಅಧ್ಯಕ್ಷ ರಾಮದಾಸ ಪ್ರಭು ದೇವಸ್ಥಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಗಣಪತಿ ಪ್ರಭು, ಸದಸ್ಯರಾದ ರಾಮದಾಸ ಪ್ರಭು ಶಿರಾಲಿ, ಅನಂತ ಕಾಮತ, ಅರವಿಂದ ಪೈ, ದಿಗಂಬರ ಶೇಟ್, ಡಾ ಪ್ರಭಾಕರ ನಂಬಿಯಾರ, ಶ್ರೀಕಾಂತ ಬಡಾಲ, ಸುಜಾತಾ ಕಾಮಕರ, ಉದಯ ಪ್ರಭು, ರಾಧಾಕೃಷ್ಣ ಪ್ರಭು ಹಾಗೂ ಭಕ್ತರು ಉಪಸ್ಥಿತರಿದ್ದರು.