ದೂರಿನ ಪ್ರಕಾರ, ಬಾಲಕಿ ಅಪ್ರಾಪ್ತಳಾಗಿರುವುದು ತಿಳಿದಿದ್ದರೂ ಆರೋಪಿತ ಪಿಎಸ್‌ಐ ದೂರವಾಣಿ ಕರೆ, ಚಾಟ್ ಹಾಗೂ ಹಣಕಾಸಿನ ನೆರವು ನೀಡುವ ಮೂಲಕ ಆಕೆಯ ವಿಶ್ವಾಸ ಗಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಮೇ 31ರಂದು ಹೊನ್ನಾವರದ ಅಪ್ಪರಕೊಂಡದಲ್ಲಿ ಸಂಬಂಧಿಯ ಮಗಳ ಹುಟ್ಟುಹಬ್ಬವಿದೆ ಎಂದು ಹೇಳಿ ಬಾಲಕಿಯನ್ನು ಹೊನ್ನಾವರಕ್ಕೆ ಕರೆಸಿಕೊಂಡು, ಅಲ್ಲಿಂದ ತನ್ನ ಕಾರಿನಲ್ಲಿ ಭಟ್ಕಳಕ್ಕೆ ಕರೆತಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.