78 ಮೀಟರ್ ಉದ್ದ 11.26 ಮೀಟರ್ ಅಗಲ ಹಾಗೂ 2.7 ಮೀಟರ್‌ನಷ್ಟು ಆಳವಿರುವ ನೌಕೆ 800 ಟನ್‌ಗೂ ಅಽಕ ಭಾರವಿದೆ. ಗಂಟೆಗೆ 25 ನಾಟಿಕಲ್ ಮೈಲ್ ವೇಗದಲ್ಲಿ ತೆರಳಬಲ್ಲದು. 7 ಅಽಕಾರಿಗಳು ಸೇರಿ 57 ಸೇಲರ್‌ಗಳು ಇದರಲ್ಲಿ ಕಾರ್ಯ ನಿರ್ವಹಿಸುವರು. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಶಕ್ತಿಶಾಲಿಯಾಗಿರುವ ಈ ಹಡಗು, ಕಡಿಮೆ ನೀರಿನಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಲು ಅಗತ್ಯವಿರುವ ಚುರುಕುತನ, ನಿಖರತೆ ಮತ್ತು ಸಹಿಷ್ಣುತೆಯನ್ನು ಹೊಂದಿದೆ. ಜಲಾಂತರ್ಗಾಮಿಗಳನ್ನು ಹೊಡೆದು ಮುಳುಗಿಸಬಹುದಾದ ಟಾರ್ಪಿಡೋ ಲಾಂಚರ್, ರಾಕೆಟ್ ಲಾಂಚರ್‌ಗಳನ್ನು, ಗನ್‌ಗಳನ್ನು ಹಡಗಿನಲ್ಲಿ ಅಳವಡಿಸಲಾಗಿದೆ. ನೌಕೆ ಸೇರ್ಪಡೆಯಿಂದ ಸೇನೆಗೆ ಮತ್ತಷ್ಟು ಬಲ ಬರಲಿದೆ.