ಜೀವನ ರೂಪಿಸುವ ಕಲಿಕೆ ಆದ್ಯತೆಯಾಗಲಿ

ಕುಮಟಾ ತಾಲೂಕಿನ ದಿವಗಿಯ ಡಿಜೆವಿಎಸ್ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ತರಗತಿಗಳಿಗೆ ಚಾಲನೆ ನೀಡಿ ಹೇಮಂತಕುಮಾರ ಗಾಂವಕರ ಮಾತನಾಡಿದರು. ಭಾಸ್ಕರ ಭಟ್, ವೀಣಾ ದಿನೇಶ, ಮಂಗಳಾ, ರತ್ನಾಕರ ಗೊಂಡ ಇತರರಿದ್ದರು.
ಕುಮಟಾ ತಾಲೂಕಿನ ದಿವಗಿಯ ಡಿಜೆವಿಎಸ್ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ತರಗತಿಗಳಿಗೆ ಚಾಲನೆ ನೀಡಿ ಹೇಮಂತಕುಮಾರ ಗಾಂವಕರ ಮಾತನಾಡಿದರು. ಭಾಸ್ಕರ ಭಟ್, ವೀಣಾ ದಿನೇಶ, ಮಂಗಳಾ, ರತ್ನಾಕರ ಗೊಂಡ ಇತರರಿದ್ದರು.
Published on
ಕುಮಟಾ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಪ್ರಗತಿಪರ ಕಾರ್ಯ ಮಾಡುತ್ತಾ ಬಂದಿದೆ. ಮಕ್ಕಳು ಒಂದು ಗುರಿಯಿಟ್ಟುಕೊಂಡು ಕಲಿಯಬೇಕು. ನಮ್ಮ ಜೀವನ ರೂಪಿಸಿಕೊಳ್ಳಲು ಅಗತ್ಯವಾದ ಕಲಿಕೆ ಪ್ರತಿಯೊಬ್ಬರ ಆದ್ಯತೆಯಾಗಬೇಕು ಎಂದು ವಕೀಲ ಹೇಮಂತಕುಮಾರ ಗಾಂವಕರ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ತಾಲೂಕಿನ ದೀವಗಿಯ ಡಿಜೆವಿಎಸ್ ಪ್ರೌಢಶಾಲೆಯಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಉಚಿತ ವಿಶೇಷ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಭಾಸ್ಕರ ಜಿ. ಭಟ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮೀಣ ಬಡ ಮಕ್ಕಳ ಶೈಕ್ಷಣಿಕ ಸುಧಾರಣೆ ಹಾಗೂ ಖಚಿತ ಫಲಿತಾಂಶಕ್ಕಾಗಿ ಹಮ್ಮಿಕೊಂಡಿರುವ ಈ ತರಬೇತಿಯ ಪ್ರಯೋಜನ ಪಡೆದು ನಮ್ಮ ಶಾಲೆಯು ಶೇ. 100 ಫಲಿತಾಂಶ ದಾಖಲಿಸಿದರೆ ತರಬೇತಿಯು ಸಾರ್ಥಕ ಎಂದರು.
ವಲಯ ಮೇಲ್ವಿಚಾರಕ ರತ್ನಾಕರ ಗೊಂಡ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ವೀಣಾ ದಿನೇಶ ಯೋಜನೆಯ ಹಾಗೂ ತರಬೇತಿಯ ಧ್ಯೇಯೋದ್ದೇಶ ವಿವರಿಸಿದರು. ಶಿಕ್ಷಕ ಸುಭಾಷ್ ಪ್ರತಿಜ್ಞಾವಿಧಿ ಬೋಧಿಸಿ ನಿರೂಪಿಸಿದರು. ಮಂಗಳಾ ವಂದಿಸಿದರು. ಪಾಂಡುರಂಗ, ಸೇವಾ ಪ್ರತಿನಿಧಿ ಶ್ಯಾಮಲಾ ಅಂಬಿಗ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net