ಒಂದೇ ದಿನ 1,12,761 ಪ್ರಕರಣಗಳು ಇತ್ಯರ್ಥ

ಲೋಕ ಅದಾಲತ್‌ನಲ್ಲಿ ಸಂಧಾನ ನಡೆಸಲಾಯಿತು.
ಲೋಕ ಅದಾಲತ್‌ನಲ್ಲಿ ಸಂಧಾನ ನಡೆಸಲಾಯಿತು.
Published on

ಕಾರವಾರ: ಬೇರಾಗಲು ನಿರ್ಧರಿಸಿ ನ್ಯಾಯಾಲಯಕ್ಕೆ ಬಂದಿದ್ದ ಜೋಡಿಗಳು ನ್ಯಾಯಾಧೀಶರ ಬುದ್ಧಿವಾದ ಕೇಳಿ ಒಟ್ಟಾಗಲು ನಿರ್ಧರಿಸಿ ಮರಳಿದ ಘಟನೆಗೆ ಜಿಲ್ಲೆಯಲ್ಲಿ ಶನಿವಾರ ನಡೆದ ಲೋಕ ಅದಾಲತ್ ಸಾಕ್ಷಿಯಾಯಿತು.

ಭಟ್ಕಳ ಮತ್ತು ಅಂಕೋಲಾದದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಈ ಘಟನೆ ನಡೆಯಿತು. ಅಲ್ಲದೇ, ನ್ಯಾಯಾಲಯದ ಮೆಟ್ಟಿಲೇರಿದ 5 ಕೌಟುಂಬಿಕ ಪ್ರಕರಣಗಳು ರಾಜಿಯಾಗಿ ಜೀವನಾಂಶಕ್ಕಾಗಿ ಸಲ್ಲಿಸಿದ್ದ ಸುಮಾರು 17 ಪ್ರಕರಣಗಳು ರಾಜಿಯಾದವು.

ಶನಿವಾರ 23 ಪೀಠಗಳಲ್ಲಿ ಲೋಕ ಅದಾಲತ್ ನಡೆದಿದ್ದು, 1,07,448 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ 5,313 ನ್ಯಾಯಾಲಯದಲ್ಲಿ ಪ್ರಕರಣಗಳು ಸೇರಿ ಒಟ್ಟೂ 1,12,761 ಪ್ರಕರಣಗಳು ಇತ್ಯರ್ಥವಾದವು. ಹಣಕಾಸಿನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 34.79 ಕೋಟಿ ರೂ. ಹಣ ಸಂಗ್ರಹ ಮತ್ತು ಪಾವತಿಯಾಗಿದೆ.

ಒಟ್ಟು 34 ಕುಟುಂಬದ ಆಸ್ತಿ ವಿಭಜನೆಯ ಪ್ರಕರಣಗಳು, ಹಾಗೂ 582 ಚೆಕ್ ಬೋನ್ಸ್ ಪ್ರಕರಣಗಳು ಮತ್ತು 37 ಮೋಟಾರು ಅಪಘಾತ ಪರಿಹಾರ ಪ್ರಕರಣಗಳು ರಾಜಿಯಾಗಿ ಇತ್ಯರ್ಥಗೊಂಡಿರುವುದು ವಿಶೇಷವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ.ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net