ಬೇಸಿಗೆಯಲ್ಲಿ ದೂರಸಂಪರ್ಕ ಇಲಾಖೆಯವರು ರಸ್ತೆಪಕ್ಕದಲ್ಲಿ ಕಾಲುವೆ ತೆಗೆದು ನಂತರ ಕೇಬಲ್ ಅಳವಡಿಸಿ ಕಾಟಾಚಾರಕ್ಕೆ ಮಣ್ಣು ಮುಚ್ಚಿದ್ದರು. ಒಂದೇ ಮಳೆಗೆ ಪುನಃ ರಸ್ತೆ ಪಕ್ಕದಲ್ಲಿ ಹೊಂಡಬಿದ್ದಂತಾಗಿರುವುದರಿಂದ ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಹೊಂಡಕ್ಕೆ ಮಣ್ಣು ಹಾಕಿದ್ದರು. ಅದು ಈಗ ಮಳೆಯ ಆರ್ಭಟಕ್ಕೆ ಕೆಸರುಗದ್ದೆಯಂತಾಗಿದೆ. ಸ್ಥಳೀಯರು ಇಲ್ಲಿ ಗಿಡ ನೆಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.