Lineman dies ಹಾವು ಕಡಿತಕ್ಕೊಳಗಾಗಿ ಲೈನ್‌ಮನ್ ಸಾವು

ಸುರೇಶ ನಾಯಕ
ಸುರೇಶ ನಾಯಕ
Published on
ಅಂಕೋಲಾ: ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ನಾಗರ ಹಾವು ಕಡಿತಕ್ಕೊಳಗಾಗಿ ಹೆಸ್ಕಾಂ ಲೈನ್‌ಮನ್ ಮೃತಪಟ್ಟ ಘಟನೆ ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಬೋಗದ್ದೆ ಸಮೀಪ ಶನಿವಾರ ಬೆಳಗ್ಗೆ ಸಂಭವಿಸಿದೆ.
ಮೊಗಟಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಹತ್ತಿರದ ನಿವಾಸಿ ಸುರೇಶ ಗೋವಿಂದರಾಯ ನಾಯಕ (48) ಮೃತಪಟ್ಟ ಲೈನ್‌ಮನ್. ಕಾರವಾರ ಗ್ರಾಮೀಣ ಪ್ರದೇಶದ ಲೈನ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕರ್ತವ್ಯಕ್ಕಾಗಿ ಕಾರವಾರಕ್ಕೆ ಹೋಗಲು ಮನೆಯಿಂದ ಮಾದನಗೇರಿ ರೈಲು ನಿಲ್ದಾಣಕ್ಕೆ ಹೋಗುವಾಗ ಘಟನೆ ಸಂಭವಿಸಿದೆ.
ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಒಳಪಡಿಸುವ ಪೂರ್ವದಲ್ಲಿ ಮೃತಪಟ್ಟಿರುವುದಾಗಿ ವೈದರು ತಿಳಿಸಿದ್ದಾರೆ. ಈ ಕುರಿತು ಮೃತನ ಸಂಬಂಧಿ ಎಂ.ಜಿ. ಗೋಕುಲ್ ದೂರು ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net