ಅಖಿಲ ಹವ್ಯಕ ಮಹಾ ಸಭಾದ ಸಂಸ್ಕಾರೋತ್ಸವಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು. ಆರ್.ಎಂ. ಹೆಗಡೆ ಬಾಳೇಸರ, ಪ್ರಶಾಂತ ಭಟ್ಟ ಮಲವಳ್ಳಿ, ಶಶಾಂಕ ಹೆಗಡೆ ಶೀಗೇಹಳ್ಳಿ, ಡಿ.ಪಿ.ಹೆಗಡೆ ಇತರರಿದ್ದರು.
Published on:
Copied
Follow Us
ಶಿರಸಿ: ನಾವು ಎಲ್ಲಿದ್ದೇವೆಯೋ ಅಲ್ಲೇ ಪ್ರಬಲವಾಗಿ ನಿಂತು ಗೆದ್ದು ತೋರಿಸಬೇಕು. ಉದ್ಯೋಗ ಅರಿಸಿ ಹೋಗುವುದಕ್ಕಿಂತ ಇದ್ದಲ್ಲೇ ಬದುಕಿ ಸಾಧಿಸಿ ತೋರಿಸಬೇಕು. ಆಗ ಮಾತ್ರ ಆಶೋತ್ತರ ಈಡೇರಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ಅಖಿಲ ಹವ್ಯಕ ಮಹಾ ಸಭೆ ಶಿಕ್ಷಕರ, ವೈದಿಕರ ವೇದಿಕೆ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸಂಸ್ಕಾರೋತ್ಸವಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ವ್ಯಕ್ತಿಯ ಬದುಕಿನ ನಡೆ, ನುಡಿ, ಬದುಕಿನ ರೀತಿ ನೀತಿಯಲ್ಲಿ ಸಂಸ್ಕಾರ ಇರಬೇಕು. ಬ್ರಾಹ್ಮಣ ಬಹುಜನ ಪ್ರಿಯ. ಭೋಜನ ಪ್ರಿಯ ಎಂಬುದಲ್ಲ. ಲೋಕಾಃ ಸಮಸ್ತಾ ಸುಖಿನೋ ಭವಂತು ಎಂಬ ಧೊರಣೆ ಇದ್ದಿದ್ದು ಹವ್ಯಕ ಸಮುದಾಯದ್ದು. ಈ ಕಾರಣದಿಂದ ಸಣ್ಣ ತಪ್ಪು ಆಗದಂತೆ ನೋಡಬೇಕು ಎಂದರು.
ಹವ್ಯಕ ಸಮುದಾಯದ ಬೆಳವಣಿಗೆಗೆ ಹಲವರ ಕೊಡುಗೆಯಿದೆ. ಸಮಾಜ ಎಲ್ಲ ಸಮುದಾಯಗಳನ್ನು ಒಳಗೊಳ್ಳಬೇಕು. ಶಿಕ್ಷಣ, ಪ್ರತಿಭೆಯ ಜತೆ ಸ್ಥಿತಿವಂತರು ಸಾಕಷ್ಟಿದ್ದಾರೆ ಎಂದ ಅವರು, ಹವ್ಯಕರಾಗಿ ಹುಟ್ಟಿರುವುದಕ್ಕೆ ಗೌರವ, ಹೆಮ್ಮೆ ಇದೆ. ಎಲ್ಲರು ಜಾತಿ ಹೇಳಲು ಗೌರವ ಪಟ್ಟರೆ ಹವ್ಯಕರು ಸ್ವಲ್ಪ ಭಯಪಡುತ್ತಾರೆ ಎಂದರು.
ಅನಂತಮೂರ್ತಿ ಹೆಗಡೆ ಮಾತನಾಡಿ, ಹವ್ಯಕರ ಸಮಸ್ಯೆಗೆ ಇಂಥ ವೇದಿಕೆ ಮೂಲಕ ಉತ್ತರಕಂಡುಕೊಳ್ಳುವ ಕೆಲಸ ಆಗಬೇಕು. ಇಲ್ಲವಾದರೆ ಮುಂದಿನ ಹದಿನೈದು ಇಪ್ಪತ್ತು ವರ್ಷದಲ್ಲಿ ಹಳ್ಳಿಗಳು ಉಳಿಯುವದು ಕಷ್ಟ ಎಂದರು.
ಹವ್ಯಕ ಮಹಾ ಸಭೆ ಉಪಾಧ್ಯಕ್ಷ ಶ್ರೀಧರ ಜಿ. ಭಟ್ಟ ಕೆಕ್ಕಾರ ಮಾತನಾಡಿ, ಶಿರಸಿ ಹಾಗೂ ಸಿದ್ದಾಪುರದಲ್ಲಿ ಹವ್ಯಕ ಭವನ ನಿರ್ಮಾಣ ಕಾರ್ಯಕ್ಕೆ ಯೋಜಿಸಿದ್ದೇವೆ. ಶಿರಸಿಯಲ್ಲಿ ಯೋಗ ಮಂದಿರದ ಆವರಣದಲ್ಲಿ ಕಚೇರಿ ಉದ್ಘಾಟನೆ ಆಗುತ್ತಿದೆ ಎಂದರು. ಅದೇ ರೀತಿ ಸಿದ್ದಾಪುರದಲ್ಲಿಯೂ ಕಚೇರಿಗಾಗಿ ಜಾಗ ಗುರುತಿಸಿದ್ದೇವೆ ಎಂದರು.
ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ನಿರ್ದೇಶಕ ಶಶಾಂಕ ಹೆಗಡೆ ಶೀಗೇಹಳ್ಳಿ, ಡಿ.ಪಿ. ಹೆಗಡೆ ಇತರರು ಇದ್ದರು. ದಿವ್ಯಾ ಹೆಗಡೆ, ಪ್ರಸಾದ ಹೆಗಡೆ, ವಿನಾಯಕ ಹೆಗಡೆ ನಿರ್ವಹಿಸಿದರು. ವಿ.ರಾಮಚಂದ್ರ ಭಟ್ ಶಿರಳಗಿ ವಂದಿಸಿದರು.