ಸಿದ್ದಾಪುರ: ಸಹಕಾರಿ ಕ್ಷೇತ್ರ ಪ್ರಜಾಪ್ರಭುತ್ವ ಮಾದರಿಯನ್ನು ಅಳವಡಿಸಿಕೊಂಡಿದ್ದು, ಇದು ರೈತರ ಹೃದಯದಂತಿದೆ. ಸರ್ಕಾರದ ಬಜೆಟ್‌ಗಿಂತ ಸಹಕಾರಿ ರಂಗದ ಬಜೆಟ್‌ನ ಮೊತ್ತ ಅತ್ಯಧಿಕವಾಗಿದೆ. ಪರಸ್ಪರ ಕೂಡುವಿಕೆ, ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಸಹಕಾರಿ ತತ್ವ(Cooperative principle) ಗಳನ್ನು ಪಾಲಿಸಿಕೊಂಡು ಬರಬೇಕಾಗಿದೆ ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.