Chamber ಚೇಂಬರ್ ವ್ಯವಸ್ಥೆ ಕಲ್ಪಿಸಿ ರಸ್ತೆ ನಿರ್ಮಿಸಲಿ

ದಾಂಡೇಲಿಯ ಮಾರುತಿನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಸ್ಥಳೀಯರು ಪ್ರತಿಭಟನೆ ನಡೆಸಿ ತಡೆಹಿಡಿದರು.  ವಕೀಲ ವಿಶ್ವನಾಥ ಜಾಧವ, ಸ್ಥಳಿಯರು ಹಾಗೂ ನಗರಸಭೆ ಅಧಿಕರಿಗಳು ಉಪಸ್ಥಿತರಿದ್ದರು.
ದಾಂಡೇಲಿಯ ಮಾರುತಿನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಸ್ಥಳೀಯರು ಪ್ರತಿಭಟನೆ ನಡೆಸಿ ತಡೆಹಿಡಿದರು. ವಕೀಲ ವಿಶ್ವನಾಥ ಜಾಧವ, ಸ್ಥಳಿಯರು ಹಾಗೂ ನಗರಸಭೆ ಅಧಿಕರಿಗಳು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಾಂಡೇಲಿ ಮಾರುತಿನಗರದಲ್ಲಿ ಪ್ರತಿಭಟನೆ
ದಾಂಡೇಲಿ: ಹತ್ತು ವಷರ್ಗಳಿಂದ ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿ ಒಂದೆಡೆಯಾದರೆ, ಇದೆ ಯುಜಿಡಿ ನಿರ್ಮಾಣ ಸಂದರ್ಭದಲ್ಲಿ ದಾಂಡೇಲಿ ನಗರದಾದ್ಯಂತ ತೆಗೆಯಲಾಗಿರುವ ಯುಜಿಡಿ ಚೇಂಬರ್‌ಗಳನ್ನು ರಸ್ತೆ ನಿರ್ಮಾಣದ ಹೆಸರಲ್ಲಿ ಮುಚ್ಚಿ ಹಾಕುವ ಪ್ರಯತ್ನ ಮಾರುತಿ ನಗರದಲ್ಲಿ ನಡೆಯುತ್ತಿರುವುದಕ್ಕೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ರಸ್ತೆ ಕಾಮಗಾರಿ ತಡೆಹಿಡಿದಿದ್ದಾರೆ.
ನಗರದಲ್ಲಿ 160 ಕೋಟಿ ರೂ.ಗಳ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆದಿದೆ. 50 ಮೀಟರ್ ಅಂತರದಲ್ಲಿ ರಸ್ತೆ ಮಧ್ಯದಲ್ಲೇ ಚೇಂಬರ್‌ಗಳನ್ನು ನಿರ್ಮಿಸಲಾಗಿದೆ. ಈ ಚೇಂಬರ್‌ಗಳು ಕಣ್ಣಿಗೆ ಕಾಣುವಂತಿರಬೇಕು ಎನ್ನುವ ನಿಯಮವಿದ್ದರೂ ನಗರಸಭೆ ಈ ಚೆಂಬರ್‌ಗಳನ್ನು ರಸ್ತೆ ನಿರ್ಮಾಣದ ಹೆಸರಲ್ಲಿ ಮುಚ್ಚಿ ಹಾಕುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮನೆಗಳ ಶೌಚಗೃಹಕ್ಕೂ ಇದುವರೆದೂ ಚೇಂಬರ್ ಸಂಪರ್ಕ ಒದಗಿಸದೆ ನೇರವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಕ್ರಮ ಸರಿಯಲ್ಲ. ಮತ್ಯಾವುದೋ ನೆಪವೊಡ್ಡಿ ನಿರ್ಮಾಣವಾದ ರಸ್ತೆ ಅಗೆದು ಮತ್ತೆ ಹಾಳುಗೆಡವುವ ಉದ್ದೇಶ ಇರುವಂತೆ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಶೌಚಗೃಹಗಳಿಗೆ ಸಂಪರ್ಕ ಒದಗಿಸಿದ ಒಂದು ವಷರ್ದ ನಂತರ ಕೂಲಂಕಷವಾಗಿ ಗಮನಿಸಿದ ಮೇಲೆ ರಸ್ತೆ ಕಾಮಾಗಾರಿ ನಡೆಸಬೇಕೆಂದು ವಕೀಲ ವಿಶ್ವನಾಥ ಜಾಧವ ಹಾಗೂ ಇತರರು ನಗರಸಭೆಯನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net