ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪಪೂ ಕಾಲೇಜಿನ ವಿದ್ಯಾಥಿರ್ ಸಂಸತ್ ಉದ್ಘಾಟಿಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು. ಎಂ.ಕೆ. ನಾಯ್ಕ, ಮಹೇಶ ಹೆಗಡೆ, ರತ್ನಾಕರ ಹೆಗಡೆ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಿದ್ದರು.
ಸಿದ್ದಾಪುರ: ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಸತ್ ಉತ್ತಮ ವೇದಿಕೆಯಾಗಿದೆ.ಶಿಕ್ಷಣದ ಜತೆಗೆ ಸಮಾಜಮುಖಿ ಚಿಂತನೆ ಮತ್ತು ಜವಾಬ್ದಾರಿಯುತ ಪ್ರಜೆಯಾಗುವ ನಿಟ್ಟಿನಲ್ಲಿ ಯುವಜನತೆ ಮುನ್ನಡೆಯಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನ ಶೈಣಿಕ ಪ್ರಗತಿ ಹಾಗೂ ವಿದ್ಯಾಥಿರ್ಗಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಮತ್ತು ಶಾಸಕರ ಹಂತದಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಕಾಲೇಜಿನ ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಅಧ್ಯತೆ ವಹಿಸಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯ ಮಹೇಶ ಹೆಗಡೆ ತ್ಯಾಗಲಿ, ಸದಸ್ಯರಾದ ಎಂ.ಆರ್. ನಾಯ್ಕ , ಆರ್.ಎಂ. ಹೆಗಡೆ, ಸತೀಶ ನಾಯ್ಕ, ಬಾಲಚಂದ್ರ ಹೆಗಡೆ, ಬಾಬು ಆದಿದ್ರಾವಿಡ, ಉಮೇಶ ನಾಯ್ಕ ಉಪಸ್ಥಿತರಿದ್ದರು.
ಹೋಟೆಲ್ ಉದ್ಯಮಿ ರತ್ನಾಕರ ಹೆಗಡೆ ಕಲಗದ್ದೆ ವಿದ್ಯಾಥಿರ್ಗಳ ಗೋಡೆ ಪತ್ರಿಕೆ "ಅರಳು' ಬಿಡುಗಡೆಮಾಡಿ ದ್ವೀತಿಯ ಪಿಯುಸಿ ವಾಷಿರ್ಕ ಪರಿಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಗಳಿಸಿದ ಕಾಲೇಜಿನ 15 ವಿದ್ಯಾಥಿರ್ಗಳಿಗೆ ತಲಾ ಐದು ಸಾವಿರದಂತೆ ನಗದು ಪ್ರೋತ್ಸಾಹಧನ ವಿತರಿಸಿದರು.
ವಿದ್ಯಾರ್ಥಿ ಪ್ರತಿನಿಧಿ ಪದ್ಮನಾಭ ಚೆನ್ನಯ್ಯ ಸೇರಿದಂತೆ 12 ತರಗತಿ ಪ್ರತಿನಿಧಿಗಳು ವಿವಿಧ ಖಾತೆಗಳ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ತನುಜಾ ನಾಯ್ಕ ಪ್ರಮಾಣವಚನ ಬೋಧಿಸಿದರು. ಎಂ.ಜಿ. ಹೆಗಡೆ ಸ್ವಾಗತಿಸಿದರು. ಎಂ.ಎಂ. ಭಟ್ಟ ವಂದಿಸಿದರು. ಎಂ.ಐ. ಹೆಗಡೆ ಮತ್ತು ಎಸ್.ಎಚ್. ನಾಯ್ಕ ನಿರೂಪಿಸಿದರು.