VOTE: ಮತದಾನ ಹಕ್ಕಿನಿಂದ ಯಾರೂ ವಂಚಿತರಾಗದಿರಲಿ

ಭಟ್ಕಳ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಲಾಯಿತು. ಸುನೀಲ ಎಂ, ಮಹೇಶ , ಅಶೋಕ, ಸುಶೀಲಾ ಮೊಗೇರ, ಗೀತಾ ಹೆಗಡೆ, ರಾಜು ನಾಯ್ಕ, ವಿ.ಟಿ. ನಾಯ್ಕ ಇತರರು ಇದ್ದರು.
ಭಟ್ಕಳ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಲಾಯಿತು. ಸುನೀಲ ಎಂ, ಮಹೇಶ , ಅಶೋಕ, ಸುಶೀಲಾ ಮೊಗೇರ, ಗೀತಾ ಹೆಗಡೆ, ರಾಜು ನಾಯ್ಕ, ವಿ.ಟಿ. ನಾಯ್ಕ ಇತರರು ಇದ್ದರು.
Published on
ಭಟ್ಕಳ: ವಿದ್ಯಾರ್ಥಿಗಳು ಮತ್ತು ಯುವ ಜನತೆ ಎಸ್‌ಐಆರ್ ಅಭಿಯಾನದಲ್ಲಿ ಮತದಾರರು (VOTERS) ಮತ್ತು ತಾಲೂಕು ಆಡಳಿತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಸುನೀಲ ಎಂ. ಹೇಳಿದರು.
ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಜಾಥಾದಲ್ಲಿ ಅವರು ಮಾತನಾಡಿದರು. ‘ಮತದಾರರ ಯಾದಿಯಲ್ಲಿ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಬಾದು. ಅರ್ಜಿ ನಮೂನೆಗಳನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ ನೀಡಬೇಕು. ನಿಗದಿತ ಕಾಲಾವಧಿಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯ ಪೂರ್ಣಗೊಳಿಸಲು ಸಹಕರಿಸಬೇಕು’ ಎಂದರು.
ತಾಪಂ ಆವರಣದಲ್ಲಿ ಉಪ ವಿಭಾಗಾಧಿಕಾರಿ ಮಹೇಶ ಅವರು ಜಾಥಾಕ್ಕೆ ಚಾಲನೆ ನೀಡಿದರು. ಭಟ್ಕಳ ಅಂಜುಮನ್ ಪದವಿ ಕಾಲೇಜು, ಗುರುಸುಧೀಂದ್ರ ಪದವಿ ಪೂರ್ವ ಕಾಲೇಜು, ಸರ್ಕಾರಿ ಐ.ಟಿ.ಐ ಕಾಲೇಜು ವಿದ್ಯಾರ್ಥಿಗಳು, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು, ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು. ತಾಪಂ ಆವರಣದಿಂದ ಆರಂಭವಾದ ಜಾಥಾ ಶಂಶುದ್ಧೀನ್ ಸರ್ಕಲ್ ಮೂಲಕ ಸಾಗಿ ಅಂಜುಮನ್ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶಗೊಂಡಿತು.
ಅಶೋಕ, ಸಿಡಿಪಿಒ ಸುಶೀಲಾ ಮೊಗೇರ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಹೆಗಡೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜು ನಾಯ್ಕ, ನಗರಸಭೆ ವ್ಯವಸ್ಥಾಪಕ ವಿ.ಟಿ. ನಾಯ್ಕ, ನಾರಾಯಣ ನಾಯ್ಕ, ಪ್ರಾಂಶುಪಾಲರಾದ ವೀರೇಂದ್ರ ಶಾನುಭಾಗ, ವಿಶ್ವನಾಥ ಪಾಲೇಕರ್, ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ಯೋಜನಾಧಿಕಾರಿ ಹೇಮಾ ನಾಯ್ಕ ತಾಲೂಕು ಸ್ವೀಪ್ ನೋಡಲ್ ಅಧಿಕಾರಿ, ಉದಯ ಬೋರಕರ್ ಇತರರು ಇದ್ದರು. ತಾಪಂ ವ್ಯವಸ್ಥಾಪಕ ಕರಿಯಪ್ಪ ನಾಯ್ಕ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net