ಸಮರ್ಥ ಭಾರತ ನಿರ್ಮಾಣಕ್ಕೆ ಹಿಂದು ಜಾಗೃತವಾಗಲಿ Hindu

ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಆಯೋಜಿಸಿದ್ದ ಬೃಹತ್ ಹಿಂದು (HINDU) ಸಮ್ಮೇಳನವನ್ನು  ಮಣಿವಣ್ಣ ಉದ್ಘಾಟಿಸಿದರು. ಪಿ.ವಿ. ಹೆಗಡೆ, ಎಂ.ಬಿ. ನಾಯ್ಕ ಹಾಗೂ ಎಲ್ಲ ಸಮಾಜದ ಪ್ರಮುಖರಿದ್ದರು.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಆಯೋಜಿಸಿದ್ದ ಬೃಹತ್ ಹಿಂದು (HINDU) ಸಮ್ಮೇಳನವನ್ನು ಮಣಿವಣ್ಣ ಉದ್ಘಾಟಿಸಿದರು. ಪಿ.ವಿ. ಹೆಗಡೆ, ಎಂ.ಬಿ. ನಾಯ್ಕ ಹಾಗೂ ಎಲ್ಲ ಸಮಾಜದ ಪ್ರಮುಖರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವನವಾಸಿ ಕಲ್ಯಾಣ ರಾಜ್ಯ ಸಂಘಟನಾ ಕಾರ್ಯದರ್ಶಿ ಮಣಿವಣ್ಣ ಅಭಿಪ್ರಾಯ
  • ಹಾರ್ಸಿಕಟ್ಟಾದಲ್ಲಿ ಸಮ್ಮೇಳನ ಆಯೋಜನೆ
  • ಹಿಂದು ಧರ್ಮವನ್ನು ಕುಗ್ಗಿಸುವುದಕ್ಕೆ ಪ್ರಯತ್ನ
ಸಿದ್ದಾಪುರ: ಸ್ವಾರ್ಥ ಹಿಂದು (Hindu) ಸಮಾಜವನ್ನು ನಾಶಮಾಡುತ್ತಿದೆ.
ನಮ್ಮ ಮಕ್ಕಳಿಗೆ ಹಿಂದು ಸಂಸ್ಕೃತಿಯನ್ನು ಹಾಗೂ ಜೀವನ ಪದ್ಧತಿಯನ್ನು ತಿಳಿಸಿ ಕೊಡುವ ಜವಾಬ್ದಾರಿ ಎಲ್ಲ ಕುಟುಂಬದಿಂದ ಆಗಬೇಕಾಗಿದೆ ಎಂದು ವನವಾಸಿ ಕಲ್ಯಾಣ ರಾಜ್ಯ ಸಂಘಟನಾ ಕಾರ್ಯದರ್ಶಿ ಮೈಸೂರು ಕೇಂದ್ರದ ಮಣಿವಣ್ಣ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾದ ಬೃಹತ್ ಹಿಂದು ಸಮ್ಮೇಳನ ಸಮಿತಿ ವತಿಯಿಂದ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಹಿಂದು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮನೆ ಮಂದಿ ನಿದ್ರಿಸುತ್ತಿರುವುದರಿಂದ ದಾಳಿಕೋರರಿಗೆ ಅನುಕೂಲವಾಗಿದೆ. ಹಿಂದು ಧರ್ಮವನ್ನು ಕುಗ್ಗಿಸುವುದಕ್ಕೆ ಪ್ರಯತ್ನಗಳು ನಡೆಯುತ್ತಿದೆ. ನಾವು ಎಚ್ಚರಗೊಳ್ಳಬೇಕಾಗಿದೆ.
ಮಕ್ಕಳಿಗೆ ಭಗವದ್ಗೀತೆ ಕುರಿತು ತಿಳಿಸಿಕೊಡಬೇಕಾಗಿದೆ. ಮಕ್ಕಳ ದಿನನಿತ್ಯದ ಚಲನ ವಲನದ ಕುರಿತು ನೋಡಬೇಕಾಗಿದೆ. ನಮ್ಮ ತನವನ್ನು ಕಳೆದುಕೊಳ್ಳದೇ ಜಾಗೃತರಾಗಬೇಕಾಗಿದೆ.
ಧರ್ಮದ ರಕ್ಷಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ನಮ್ಮದಲ್ಲದ ಸಂಸ್ಕೃತಿಗೆ ಮಾರು ಹೋಗುವುದಕ್ಕಿಂತ ನಮ್ಮ ಸಂಸ್ಕೃತಿಯನ್ನು ಆಚರಿಸಬೇಕು.
ಹಿಂದು ಸಮಾಜ ಜಾಗೃತರಾವಾದರೆ ಸಮರ್ಥ ಭಾರತ ನಿರ್ಮಾಣ ಆಗುತ್ತದೆ ಎಂದು ಹೇಳಿದರು.
ಸಮಾಜದ ಪ್ರಮುಖರಾದ ವಿ.ಚಂದ್ರಶೇಖರ ಭಟ್ಟ ಗಾಳಿಮನೆ, ಮಂಜುನಾಥ ನಾಯ್ಕ ಗುಳಮಾವಿನಜಡ್ಡಿ, ಗೋಪಾಲ ಎಂ.ಗೌಡ ಹುತ್ಗಾರ, ಮಂಜುನಾಥ ಬಂಗಾರ್ಯ ಮಡಿವಾಳ ಕಂಚಿಮನೆ, ಬಂಗಾರ್ಯ ಹಸ್ಲರ್ ಶಾನಬಾಳೆಗದ್ದೆ, ವಿಷ್ಣು ವಜ್ರ ಶೇಟ್ ಹಾರ್ಸಿಕಟ್ಟಾ, ಮುತ್ತ ಮರ್ಲ ದೇವಾಡಿಗ ಪೇರ‌್ಲೇಕೊಡ್ಲು, ನಾರಾಯಣ ನಾಗು ಗೌಡ ಕುರವಂತೆ ಉಪಸ್ಥಿತರಿದ್ದರು.

ಸನ್ಮಾನ

ಕೃಷ್ಣ ಗೌಡ ಮಾದ್ಲಮನೆ, ಸುಬ್ಬಿ ಗೌಡ ಸಂಪೇಸರ, ಕೃಷ್ಣಮೂರ್ತಿ ಹೆಗಡೆ ಕುಂಬಾರಕುಳಿ, ರವಿ ನಾಯ್ಕ ದೇವಾಸ, ಕೃಷ್ಣಾಬಾಯಿ ಶಾನಭಾಗ ಹಾರ್ಸಿಕಟ್ಟಾ, ಕಾವ್ಯಾ ಆರ್.ಶೇಟ್ ಗಾಳಿಮನೆ, ನಾರಾಯಣ ಗೌಡ ಹುತ್ಗಾರ, ಮಾದೇವಿ ಮಡಿವಾಳ ಮುಟ್ಟಳ್ಳಿ, ಮಂಜುನಾಥ ಚೆನ್ನಯ್ಯ ಹೊನ್ನೆಹದ್ದ ಅವರನ್ನು ಸನ್ಮಾನಿಸಲಾಯಿತು.
ಸುಮಂಗಲಾ ಭಟ್ಟ ಎಲೆಸರ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಸಮ್ಮೇಳನ ಸಮಿತಿ ಸಂಚಾಲಕ ಎಂ.ಬಿ.ನಾಯ್ಕ ಹಳಿಯಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ಸಮಿತಿ ಅಧ್ಯಕ್ಷ ಪಿ.ವಿ.ಹೆಗಡೆ ಹೊಸಗದ್ದೆ ವಂದಿಸಿದರು.
ವಂದನಾ ಹೆಗಡೆ ಕುಂಬಾರಕುಳಿ ವಂದೇ ಮಾತರಂ ಗೀತೆ ಹಾಡಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net