ಅಭಿವೃದ್ಧಿಗೆ ಪೂರಕ ಯೋಜನೆಗಳು ಜಾರಿಯಾಗಲಿ Cooperative

ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ (Cooperative) ಸಂಘದಲ್ಲಿ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಎಂ.ಎಲ್.ಭಟ್ಟ, ಜಿ.ಆರ್. ಹೆಗಡೆ, ರವೀಂದ್ರ ಹಾಸ್ಯಗಾರ, ಚಿದಂಬರ ನಾಯ್ಕ ಇತರರಿದ್ದರು.
ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ (Cooperative) ಸಂಘದಲ್ಲಿ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಎಂ.ಎಲ್.ಭಟ್ಟ, ಜಿ.ಆರ್. ಹೆಗಡೆ, ರವೀಂದ್ರ ಹಾಸ್ಯಗಾರ, ಚಿದಂಬರ ನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂ.ಎಲ್.ಭಟ್ಟ ಉಂಚಳ್ಳಿ ಅಭಿಪ್ರಾಯ
  • ಸಹಕಾರಿ ಸಪ್ತಾಹ ಆಚರಣೆ
  • ಹೆಗ್ಗರಣಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜನೆ
ಸಿದ್ದಾಪುರ: ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಸಹಕಾರಿ ( Cooperative) ಸಂಘಗಳ ಕಾಯ್ದೆಯಲ್ಲಿನ ಅನೇಕ ತಿದ್ದುಪಡಿಗಳು ರಾಜಕೀಯ ಪ್ರೇರಿತವಾಗಿವೆ.
ಇದು ಸಹಕಾರಿ ಸಂಘಗಳ ಅಭಿವೃದ್ಧಿಗೆ ಧಕ್ಕೆ ತರುವಂತಿದೆ ಎಂದು ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ ಹೇಳಿದರು.
ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ 72ನೇ ಸಹಕಾರಿ ಸಪ್ತಾಹದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸರ್ಕಾರಗಳು ಸಹಕಾರಿ ಸಂಘಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ತರುವುದರ ಜತೆಗೆ ರೈತರಿಗೆ ಕೃಷಿ ಪೂರಕವಾದ ಸೌಲಭ್ಯ ಒದಗಿಸಬೇಕು. ಅಡಕೆಗೆ ಹರಡಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನವನ್ನು ಮತ್ತಷ್ಟು ಸೆಳೆಯಬೇಕಾಗಿದೆ ಎಂದರು.
ಸಹಕಾರಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಯಡಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ. ಆರ್. ಹೆಗಡೆ ಬೆಳ್ಳೆಕೇರಿ ಸಹಕಾರಿ ಸಂಘಗಳು ಸದಸ್ಯರನ್ನ ಆರ್ಥಿಕವಾಗಿ ಸದೃಢರನ್ನಾಗಿ ಮಾಡುತ್ತಿವೆ,
ಅಲ್ಲದೇ ಸದಸ್ಯರಿಗೆ ಸಹಕಾರ ಸಂಘಗಳಲ್ಲಿ ವ್ಯವಹರಿಸಲು ಅನುಕೂಲವಾಗುವಂತೆ ಮುಂದಿನ ಪೀಳಿಗೆಗೆ ಸಹಕಾರ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವುದು ಅತೀ ಅವಶ್ಯವಿದೆ ಎಂದರು.
ಸಹಕಾರಿ ಸಂಘಗಳ ನಿರ್ವಹಣೆಯಲ್ಲಿ ಆಡಳಿತ ಮಂಡಳಿ ಸದಸ್ಯರ ಹಾಗೂ ಸಿಬ್ಬಂದಿ ಜವಾಬ್ದಾರಿ ಕುರಿತು ಸಹಕಾರಿ ಸಂಘಗಳ ನಿವೃತ್ತ ಜಂಟಿ ನಿರ್ದೇಶಕ ಎಂ.ಎನ್.ಹೆಗಡೆ ಹುಲ್ಲಾಳಗದ್ದೆ ಮಾಹಿತಿ ನೀಡಿದರು.
ಸಂಘದ ಹಿರಿಯ ಸದಸ್ಯ ರಾಮಚಂದ್ರ ರಾ. ಭಟ್ಟ ಉಂಚಳ್ಳಿ (ಧರೆ), ಬೀರ ತಿಮ್ಮ ನಾಯ್ಕ ಕೊಪ್ಪದಜಡ್ಡಿ (ಹೆಗ್ಗರಣಿ), ಚಂದ್ರಶೇಖರ ಜಿ.ಭಟ್ಟ ಮಾವಿನಮನೆ, ಕಮಲಾ ರಾಮಚಂದ್ರ ಹೆಗಡೆ ಮಠದಗದ್ದೆ, ಸುಬ್ರಾಯ ವೆಂ. ಹೆಗಡೆ ಹಿರೇಹದ್ದ, ಹುಲಿಯಾ ರಾಮ ಗೌಡ ಬಿಳೇಕಲ್ಮನೆ, ತಿಮ್ಮ ಹುಲಿಯಾ ಗೌಡ ಅತ್ತಿಸವಲು, ಗೋಪಾಲ ವೆಂಕಟ್ರಮಣ ಹೆಗಡೆ ಮಾಗೋಡಜಡ್ಡಿ, ವೆಂಕಟ್ರಮಣ ಕಟ್ಯ ಗೌಡ ಕುಳಿಕಟ್ಟು ಅವರನ್ನು ಸನ್ಮಾನಿಸಲಾಯಿತು.
ಸಿಎ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಮಧುರಾ ಮಹಾಬಲೇಶ್ವರ ಹೆಗಡೆ ಗೋಳಿಕೈ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ತಂಡಾಗುಂಡಿಯ ಜನವಿಕಾಸ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಎಂ. ಹಾಸ್ಯಗಾರ ನಾಭಿಪುರಂ, ಸಂಘದ ಉಪಾಧ್ಯಕ್ಷ ಚೌಡು ಗೌಡ ಬಿಳೆಕಲ್ಮನೆ, ಮುಖ್ಯಕಾರ್ಯನಿರ್ವಾಹಕ ಚಿದಂಬರ ಎಂ.ನಾಯ್ಕ ಉಪಸ್ಥಿತರಿದ್ದರು.
ಸತೀಶ ಹೆಗಡೆ ಮಾಗೋಡಜಡ್ಡಿ ಸ್ವಾಗತಿಸಿದರು, ಸುಬ್ರಾಯ ಹೆಗಡೆ ಸಾಯಿಮನೆ ವಂದಿಸಿದರು. ಪ್ರಕಾಶ ಹೆಗಡೆ ಚಾರೆಕೋಣೆ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net