ಸೋಮವಾರ ರಾತ್ರಿ ಕೂಡ ಇಲ್ಲಿನ ಹಿಲ್-ಟಾಪ್ ಭಾಗದಿಂದ ಕುಡ್ಲೆ ಮತ್ತು ಓಂ ಬೀಚ್ ಕ್ರಾಸ್ ಸೇರುವ ಮಧ್ಯದಲ್ಲಿನ ಕಾಂಕ್ರೀಟ್ ರಸ್ತೆಯ ಮೇಲೆ ವಾಹನದ ಮೇಲೆ ಹೋಗುತ್ತಿದ್ದ ಮಹಾರಾಷ್ಟçದ ಪ್ರವಾಸಿಗರು ಇಂತಹ ಚಿರತೆಯೊಂದನ್ನು ನೋಡಿದ್ದಾರೆ. ದೂರದಲ್ಲಿ ಚಿರತೆ ರಸ್ತೆಯ ಮೇಲೆ ಹೋಗುತ್ತಿರುವುದನ್ನು ಕಂಡ ಇವರು ತಮ್ಮ ವಾಹನವನ್ನು ದೂರದಲ್ಲಿ ನಿಲ್ಲಿಸಿ ಹೆಡ್-ಲೈಟ್ ಬಳಸಿ ಚಿರತೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುತ್ತಿರುವ ಸಂಪೂರ್ಣ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜÁಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ. ಈತನಕ ಇಂತಹ ಚಿರತೆಗಳು ಯಾರಿಗೂ ಅಪಾಯ ಉಂಟು ಮಾಡದೆ ತಮ್ಮಷ್ಟಕ್ಕೆ ತಾವು ಸಂಚರಿಸುತ್ತಿರುವುದರಿAದ ಚಿರೆತೆಗಳ ಬಗ್ಗೆ ಸ್ಥಳೀಯ ವಾಹನಕಾರರು, ವಿಶೇಷವಾಗಿ ರಿಕ್ಷಾಕಾರರು ಮತ್ತು ಹೆಚ್ಚಿನವರು ಆತಂಕಕ್ಕೊಳಗಾಗಿಲ್ಲ ಎನ್ನಲಾಗಿದೆ.