ಭಾರಿ ಪ್ರಮಾಣದ ಪಡಿತರ ಅಕ್ಕಿ ವಶಕ್ಕೆ

ಸಾಂದರ್ಭಿಕ ಎಐ ಚಿತ್ರ
ಸಾಂದರ್ಭಿಕ ಎಐ ಚಿತ್ರ
Published on

ಕಾರವಾರ: ಭತ್ತದ ಚೀಲಗಳ ನಡುವೆ ತುಂಬಿಕೊಂಡು ಸಾಗಿಸುತ್ತಿದ್ದ ಭಾರಿ ಪ್ರಮಾಣದ ಪಡಿತ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಅಂಕೋಲಾದಲ್ಲಿ ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಾಂತಿಕಾಂಬಾ ಹೆಸರಿನ ಲಾರಿಯಲ್ಲಿ ಅಂಕೋಲಾ ಬೆಳಸೆ ತಳಗದ್ದೆ ಕ್ರಾಸ್ ಬಳಿ ಸಾಗಿಸುತ್ತಿದ್ದ ಲಾರಿಯನ್ನು ಅಂಕೋಲಾ ಪ್ರಭಾರ ಆಹಾರ ನಿರೀಕ್ಷಕ ಮಂಜುನಾಥ ರೆಡ್ಡಿ ಸಿ.ಹುಚ್ಚಣ್ಣನವರ್ ತಡೆದು ವಿಚಾರಣೆ ನಡೆಸಿದಾಗ ಅಕ್ರಮ ಬಯಲಾಗಿದೆ.
ಮೇಲೆ ಭತ್ತದ ಚೀಲಗಳನ್ನು ತುಂಬಿ ಒಳಗಡೆ ಯಾವುದೇ ದಾಖಲೆ ಇಲ್ಲದ 50 ಕೆಜಿಯ ಒಟ್ಟು 152 ಪಡಿತರ ಅಕ್ಕಿಯ ಚೀಲಗಳನ್ನು ತುಂಬಿ ಸಾಗಿಸಲಾಗುತ್ತಿತ್ತು. ಈ ಸಂಬಂಧ ಅಂಕೋಲಾದ ವಂದಿಗೆಯ ರಾಜೇಶ ಎಸ್.ಶೆಟ್ಟಿ, ಪ್ರತೀಕ ರಾಜೇಶ ಶೆಟ್ಟಿ, ವಾಹನದ ಮಾಲೀಕ ಹರೀಶ ಪಟಗಾರ, ವಾಹನ ಚಾಲಕ ನಾರಾಯಣ ಸಾಳಸ್ಕರ್, ಹಮಾಲಿ ಜಗದೀಶ ಸುರೇಶ ಆಗೇರ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಒಟ್ಟು 3.07,200 ರೂ. ಮೌಲ್ಯದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net