ಸಿದ್ದಾಪುರ ತಾಲೂಕಿನ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಪ್ರಯೋಗ ಶಾಲೆಯನ್ನು ಕೆ.ಆರ್. ಹೆಗಡೆ ಉದ್ಘಾಟಿಸಿದರು. ಶಂಕರನಾರಾಯಣ ಭಟ್ಟ, ಗಣಪತಿ ಭಟ್ಟ, ಸುಪ್ರೀತ್ ಕಿಟ್ಟೆನಕೆರೆೆ, ಸುರೇಂದ್ರ ಕುಲಕಣಿರ್, ರಾಜು ಅಡಕಳ್ಳಿ, ನಾಗೇಂದ್ರ ಮುತ್ಮುರ್ಡು, ವಸಂತ್ ಹೆಗಡೆ ಇತರರಿದ್ದರು.
ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಮಂಗಳವಾರ ಮನುವಿಕಾಸ ಸಂಸ್ಥೆ ಕರ್ಜಗಿ ಹಾಗೂ ಗ್ಯಾನ್ ಪ್ರೊ ಸಂಸ್ಥೆ ಬೆಂಗಳೂರು ಅವರ ಸಹಯೋಗದೊಂದಿಗೆ ಗಣಿತ ಮತ್ತು ವಿಜ್ಞಾನ ಪ್ರಯೋಗ ಶಾಲೆಯ ಉದ್ಘಾಟನೆ ಜರುಗಿತು. ನಿವೃತ್ತ ಶಿಕ ಕೆ.ಆರ್. ಹೆಗಡೆ ಪ್ರಯೋಗ ಶಾಲೆ ಉದ್ಘಾಟಿಸಿದರು.
ಗ್ಯಾನ್ ಪ್ರೊ ಸಂಸ್ಥೆಯ ಸ್ಥಾಪಕ ಸುಪ್ರೀತ್ ಕಿಟ್ಟೆನಕೆರೆ ಮಾತನಾಡಿ, ಪ್ರಯೋಗಶಾಲೆಯಿಂದ ಮಕ್ಕಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಯಲು ಹೆಚ್ಚು ಆಸಕ್ತಿ ಮೂಡಿಸುವುದರ ಜತೆಗೆ ವಿಜ್ಞಾನದ ಕುರಿತು ತಿಳಿದುಕೊಳ್ಳಲು ಸಾಧ್ಯ ಎಂದರು.
ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ಟ ಕರ್ಜಗಿ ಮಾತನಾಡಿ, ಮನುವಿಕಾಸ ಸಂಸ್ಥೆಯು ಗ್ಯಾನ್ ಪ್ರೊ ಸಹಯೋಗದೊಂದಿಗೆ ಗ್ರಾಮೀಣ ಶಾಲೆಗಳಲ್ಲಿ ಲ್ಯಾಬ್ ಇನ್ ಎ ಬಾಕ್ಸ್ ಕಾರ್ಯಕ್ರಮ ಅನುಷ್ಠ್ಠಾನಗೊಳಿಸುತ್ತಿದೆ ಎಂದರು.
ವಿಜ್ಞಾನಿ ಸುರೇಂದ್ರ ಕುಲಕಣಿರ್, ದೇಶದ ರಣೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ವಿವರಿಸಿದರು.
ಕಾಳಿಕಾ ಭವಾನಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರನಾರಾಯಣ ಭಟ್ ಗಿರಿಗಡ್ಡೆ ಅಧ್ಯತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸುರೇಂದ್ರ ಕುಲಕಣಿರ್, ರಾಜು ಅಡಕಳ್ಳಿ, ಗಣಪತಿ ಭಟ್ಟ ಮತ್ತು ಸುಪ್ರೀತ್ ಕಿಟ್ಟೆನಕೆರೆ ಅವರನ್ನು ಸನ್ಮಾನಿಸಲಾಯಿತು. ಲೇಖಕ ರಾಜು ಅಡಕಳ್ಳಿ, ನಾಗೇಂದ್ರ ಮುತ್ಮುರ್ಡು, ವಸಂತ್ ಮಂಜುನಾಥ್ ಹೆಗಡೆ ಮಾದನಕಳ್ಳು, ಕಾಳಿಕಾ ಭವಾನಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಲ್ಲ ಶಿಕರು ಮತ್ತು ಮನುವಿಕಾಸ ಸಂಸ್ಥೆ ಸಿಬ್ಬಂದಿ ಇದ್ದರು.
ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಜಿ.ಐ. ಹೆಗಡೆ ಸ್ವಾಗತಿಸಿದರು. ಶಿಕ್ಷಕ ಹನುಮಂತಪ್ಪ ಎಸ್.ಆರ್. ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಯಶಸ್ವಿನಿ ಮೂತಿರ್ ವಂದಿಸಿದರು.