ಅಕ್ರಮ ನಡೆಸಿರುವವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಗ್ರಾಹಕರಿಗೆ ಠೇವಣಿ ಹಣ ಮರಳಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಶೀಘ್ರ ಕ್ರಮ ವಹಿಸುವಂತೆ ಕಾರವಾರ ಎಸಿ ಅವರಿಗೆ ಮನವಿ ಮಾಡಿದ್ದೇವೆ ಎಂದು ವಂಚಿತ ಗ್ರಾಹಕರ ಸಂಘದ ಕಾರ್ಯದರ್ಶಿ ಗಜೇಂದ್ರ ನಾಯ್ಕ ತಿಳಿಸಿದರು. ಸಂಘದ ಅಧ್ಯಕ್ಷ ಹೂವಪ್ಪ ಎಚ್ ದೊಡ್ಡಣ್ಣವರ್, ಸಹ ಕಾರ್ಯದರ್ಶಿ ಕೃಷ್ಣಾನಂದ ವಿ.ನಾಯ್ಕ, ಖಜಾಂಚಿ ಸಾಯಿನಾಥ ಎಲ್.ಮೇತ್ರಿ, ಸದಸ್ಯರಾದ ಆರ್.ಎಂ.ನಾಯ್ಕ, ಗಜಾನನ ನಾಯಕ, ಸಾಯಿನಾಥ ಮೇತ್ರಿ ಸುದ್ದಿಗೋಷ್ಠಿಯಲ್ಲಿದ್ದರು.