ಈ ವರ್ಷ ಬಜೆಟ್‌ನಲ್ಲಿ 4.52 ಕೋಟಿ ರೂ. ಲಭ್ಯವಾಗಿದ್ದು, ಅದರಲ್ಲಿ ಮಿರ್ಜಾನ್‌ನಲ್ಲಿ ಮಾಡ್ಯೂಲ್ ಶೆಲ್ಟರ್, ಕಾರವಾರದಲ್ಲಿ ಹೆಚ್ಚಿನ ಆಸನ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಪ್ರಸ್ತುತ 8.72 ಕೋಟಿ ವೆಚ್ಚದಲ್ಲಿ ರಾಜ್ಯ ಕರಾವಳಿಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅದರಲ್ಲಿ ಗೋಕರ್ಣ ರೋಡ್‌ನಲ್ಲಿ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ. ಕಳೆದ ವರ್ಷ ಗೋಕರ್ಣದಲ್ಲಿ ಮೊದಲ ಮತ್ತು ಕುಮಟಾದಲ್ಲಿ ಎರಡನೇಯ ಎತ್ತರಿಸಿದ ಪ್ಲಾಟ್‌ಫಾರ್ಮ್ ನಿರ್ಮಾಣ, ಭಟ್ಕಳದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣೆ, ಕಾರವಾರ, ಮುರ್ಡೇಶ್ವರದಲ್ಲಿ ಹೊಸ ನಾಮಫಲಕ ಅಳವಡಿಕೆ, ಮುರ್ಡೇಶ್ವರದಲ್ಲಿ ಹೊಸ ಶೌಚಗೃಹ ಸಂಕೀರ್ಣ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.