ಕೇಂದ್ರದಿಂದ 7 ಸಾವಿರ ಕೋಟಿ ರೂ.ತರಲು ಪ್ರಯತ್ನ

ಕಾಗೇರಿ ರೈಲನ್ನು ಸ್ವಾಗತಿಸಿದರು.
ಕಾಗೇರಿ ರೈಲನ್ನು ಸ್ವಾಗತಿಸಿದರು.
Published on

ಕಾರವಾರ : ಕೊಂಕಣ ರೈಲ್ವೆಗೆ ಕೇಂದ್ರ ಸರ್ಕಾರದಿಂದ ಸುಮಾರು 7 ಸಾವಿರ ಕೋಟಿ ರೂ. ಅನುದಾನ ತರುವ ಬಗ್ಗೆ ಪ್ರಯತ್ನ ನಡೆದಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕಾರವಾರ ರೈಲ್ವೆ ನಿಲ್ದಾಣದಲ್ಲಿ ರೋಟರಿ ಕ್ಲಬ್‌ ವತಿಯಿಂದ ನರ‍್ಮಾಣವಾದ ಮಹಿಳೆಯರ ಪಿಂಕ್‌ ಬಬಲ್‌ ವಿಶೇಷ ಆಸನ ವ್ಯವಸ್ಥೆ ಉದ್ಘಾಟಿಸಿ, ಕಾಯಂಗೋಂಡ ಮಡಗಾಂವ-ಕಾರವಾರ ರೈಲು ಸೇವೆಯನ್ನು ಸ್ವಾಗತಿಸಿ ಅವರು ಮಾತನಾಡಿದರು.

ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರ ದಟ್ಟಣ ವಿಪರೀತವಾಗಿದೆ. ಪ್ರತಿ ದಿನ 85 ಕ್ಕಿಂತ ಹೆಚ್ಚು ರೈಲುಗಳು ಓಡಾಡುತ್ತಿವೆ. ಅದನ್ನು ತಪ್ಪಿಸಲು ಅಗತ್ಯವಿದ್ದಲ್ಲಿ ಎರಡನೇ ಲೈನ್‌ ಸೇರಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ಕಾರವಾರ ನಿಲ್ದಾಣದಲ್ಲಿ ಲಿಫ್ಟ್‌ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ ಎಂದರು. ಗೋಕರ್ಣ, ಕುಮಟಾ ಎರಡನೇ ಎತ್ತರಿಸಿದ ಫ್ಲಾಟ್‌ಫಾರ್ಮ್‌ ಸಿದ್ಧ ಮಾಡಲಾಗಿದೆ. ಮುರ್ಡೇಶ್ವರ ಭಟ್ಕಳದಲ್ಲಿ ವಿವಿಧ ಪ್ರಯಾಣಿಕರ ಸೌಲಭ್ಯ ಒದಗಿಸಲಾಗಿದೆ ಎಂದರು.

ಪ್ರಚಾರದ ಹೇಳಿಕೆ ಬಿಡಲಿ

ಪ್ರಿಯಾಂಕ ಖರ್ಗೆ ಅವರು ಬಿಜೆಪಿ, ಆರ್‌ಎಸ್‌ಎಸ್‌ಅನ್ನು ದೂಶಿಸುವುದನ್ನು ಬಿಟ್ಟು ತಮಗೆ ಸಿಕ್ಕ ಇಲಾಖೆಯಲ್ಲಿ ಜವಾಬ್ದಾರಿಯಿಂದ ಕಾ ನಿರ‍್ವಹಿಸಲಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಿಯಾಂಕ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಮೂರು ವರ್ಷ ಏನು ಮಾಡಲು ಸಾಧ್ಯವಾಗಿಲ್ಲ. ಈಗ ಆತುರದಲ್ಲಿ ಪ್ರಚಾರದ ಹೇಳಿಕೆ ನೀಡುವುದನ್ನು ಬಿಡಲಿ ಎಂದರು. ಇಂದಿರಾಗಾಂಧಿ ಅವರಿಗೇ ಆರ್‌ಎಸ್‌ಎಸ್‌ ಅನ್ನು, ಜನಸಂಘವನ್ನು ಏನೂ ಮಾಡಲು ಸಾಧ್ಯವಾಗಿಲ್ಲ ಬದಲಾಗಿ ನಮ್ಮ ಶಕ್ತಿ ಬೆಳೆಯುತ್ತಿದೆ. ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಜನ ನಮ್ಮ ರಾಷ್ಟ್ರೀಯ ವಿಚಾರಧಾರೆಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆರ್‌ಎಸ್‌ಎಸ್‌ಅನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್‌ ಜನರಿಂದ ತಿರಸ್ಕರಿಸಲ್ಪಟ್ಟಿದೆ. ಅದರ ಸ್ಥಿತಿ ಏನಾಗಿದೆ ಎಂಬುದನ್ನು ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಸಿಎಂ ಬದಲಾವಣೆಯಿಂದ ರಾಜ್ಯದ ಆಡಳಿತದಲ್ಲಿ ಏನೂ ಬದಲಾವಣೆ ಆಗದು ಎಂದು ಕಾಗೇರಿ ಹೇಳಿದರು. ಹಿಂದಿನ ಮೂರು ವರ‍್ಷ ಸಿಎಂ ಅಧಿಕಾರ ಹಂಚಿಕೆ ಗೊಂದಲದಲ್ಲಿಯೇ ಕಾಲ ಕಳೆದು ಹೋಗಿದೆ. ಅಭಿವೃದ್ಧಿ ಆಗಿಲ್ಲ. ಈಗ ಮಂತ್ರಿಗಿರಿಯ ಗೊಂದಲ ಶುರುವಾಗಿದೆ. ಈ ಎರಡು ರ‍್ಷವೂ ಭ್ರಷ್ಟಾಚಾರ, ಓಲೈಕೆ ರಾಜಕಾರಣ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದರು.

"

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 4400 ದಿನವನ್ನು ಇಂದಿಗೆ ಪೈರೈಸಿ ದೇಶದಲ್ಲಿ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಅವಧಿಯಲ್ಲಿ ಅವರು ಅಂತ್ಯೋದಯ ಆಡಳಿತವನ್ನು ಯಶಸ್ವಿಯಾಗಿ ಜಾರಿಗೆ ತಂದವರು ನರೇಂದ್ರ ಮೋದಿ. ವಿಶ್ವದಲ್ಲಿ ಭಾರತದ ಮಾಡೆಲ್‌ ಸೃಷ್ಟಿ ಮಾಡಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net