ಸಂಸ್ಕಾರದ ಜೀವಂತಿಕೆಗೆ ಕೊಂಕಣ ಸಂಸ್ಥೆ ಬದ್ಧ

ಕುಮಟಾದ ಸರಸ್ವತಿ ಸಂಭ್ರಮ ಕಾರ್ಯಕ್ರಮದಲ್ಲಿ ಆದರ್ಶ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎನ್.ಆರ್.ಹೆಗಡೆ, ಮುರಲೀಧರ ಪ್ರಭು, ದಾಮೋದರ ಭಟ್, ಅಶೋಕ ಪ್ರಭು, ರಮೇಶ ಪ್ರಭು, ಶೇಷಗಿರಿ ಶಾನಭಾಗ ಇತರರು ಇದ್ದರು.
ಕುಮಟಾದ ಸರಸ್ವತಿ ಸಂಭ್ರಮ ಕಾರ್ಯಕ್ರಮದಲ್ಲಿ ಆದರ್ಶ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎನ್.ಆರ್.ಹೆಗಡೆ, ಮುರಲೀಧರ ಪ್ರಭು, ದಾಮೋದರ ಭಟ್, ಅಶೋಕ ಪ್ರಭು, ರಮೇಶ ಪ್ರಭು, ಶೇಷಗಿರಿ ಶಾನಭಾಗ ಇತರರು ಇದ್ದರು.
Published on
ಕುಮಟಾ: ಶಿಕ್ಷಕರ, ಪಾಲಕರ, ಹಾಗೂ ಸ್ವಂತದ ಪರಿಶ್ರಮದಿಂದ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಸಾಕಾರಗೊಂಡಿದೆ. ಸಂಸ್ಕೃತಿ ಹಾಗೂ ಸಂಸ್ಕಾರದ ಜೀವಂತಿಕೆಗೆ ಕೊಂಕಣ ಸಂಸ್ಥೆಯು ಕಂಕಣ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಡಯಟ್ ಪ್ರಾಚಾರ್ಯ ಎನ್. ಆರ್. ಹೆಗಡೆ ಹೇಳಿದರು.
ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್‌ನ ರಂಗಾದಾಸ ಶಾನಭಾಗ ಹೆಗಡೇಕರ ಬಾಲಮಂದಿರ, ಸರಸ್ವತಿ ವಿದ್ಯಾ ಕೇಂದ್ರ, ಸಿ.ವಿ.ಎಸ್.ಕೆ ಪ್ರೌಢಶಾಲೆ, ಸರಸ್ವತಿ ಪಿ.ಯು ಕಾಲೇಜು, ಜಾನಕಿಪ್ರಭು ಪ್ರತಿಭಾ ಚೈತನ್ಯ ಕೇಂದ್ರ ಸಾದರಪಡಿಸಿದ 3 ದಿನಗಳ ‘ಸರಸ್ವತಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು, ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ದಾಮೋದರ ಭಟ್ಟ ಮಾತನಾಡಿದರು. ವಿದ್ಯಾರ್ಥಿಗಳ ಹಸ್ತಪ್ರತಿ ‘ಸರಸ್ವತಿ ಸಂಪದ’ ಹಾಗೂ ಗಣೇಶ ಜೋಶಿ ಸಂಕೊಳ್ಳಿ ವಿರಚಿತ ‘ಜ್ಞಾನಾಂಜನ’ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು. ಪ್ರಸಕ್ತ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆದರ್ಶ ವಿದ್ಯಾರ್ಥಿಗಳಿಗೆ ಬಹುಮಾನವಿತ್ತು ಪ್ರೋತ್ಸಾಹಿಸಲಾಯಿತು. ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಸನ್ನಡತೆ, ಸೃಜನಶೀಲ ವಿದ್ಯಾರ್ಥಿಗಳಿಗೆ ವಿಭಾ ನಿಧಿ ಶಿಷ್ಯವೇತನ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಮೇಶ ಪ್ರಭು, ಸಹ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರಾದ ಡಿ.ಡಿ.ಕಾಮತ್, ರಾಮಕೃಷ್ಣ ಗೋಳಿ, ಅನಂತ ಶಾನಭಾಗ, ಅಶೋಕ ಶಾನಭಾಗ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಸರಸ್ವತಿ ಪಿ.ಯು ಕಾಲೇಜಿನ ಪ್ರಾಚಾರ್ಯ ಕಿರಣ ಭಟ್ಟ, ಮುಖ್ಯಶಿಕ್ಷಕರಾದ ಸುಮಾ ಪ್ರಭು, ಸಾವಿತ್ರಿ ಹೆಗಡೆ, ಸುಜಾತಾ ನಾಯ್ಕ, ಸುಜಾತಾ ಹೆಗಡೆ, ಗಣೇಶ ಜೋಶಿ, ಮಾತೃ ಮಂಡಳಿಯ ಪ್ರಿಯಾಂಕಾ ಕಾಮತ್, ಗಾಯತ್ರಿ ಪ್ರಭು, ವೀಣಾ ಹೆಗಡೆ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಗಣೇಶ ಜೋಶಿ ಸ್ವಾಗತಿಸಿದರು. ಶಿಕ್ಷಕಿ ಶಾಹಿದಾ ಶೆಟ್ಟಿ, ವಿನಯಾ ನಾಯಕ, ಜೆಸ್ವಿನ ನೊರೋನಾ, ಗೌರೀಶ ಭಂಡಾರಿ ನಿರೂಪಿಸಿದರು. ವಿಶ್ವಸ್ಥ ಡಿ.ಡಿ.ಕಾಮತ ವಂದಿಸಿದರು.
ವಿದ್ಯಾರ್ಥಿಗಳಿಂದ ಕಲೆ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಬೃಹತ್ ವಸ್ತು ಪ್ರದರ್ಶನ, ವೈವಿಧ್ಯಮಯ ಸ್ಟಾಲ್‌ಗಳು, ಆಹಾರಮೇಳ, ಸಾಧನೆಗಳ ಅವಲೋಕನ, ಸಾಧಕರಿಗೆ ಸನ್ಮಾನ, ಜಾನಕಿಪ್ರಭು ಪ್ರತಿಭಾ ಚೈತನ್ಯ ಕೇಂದ್ರದ ಕಲಾ ಪ್ರದರ್ಶನ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದಿನವೂ ನಡೆದು ಸರಸ್ವತಿ ಸಂಭ್ರಮದ ಮೆರುಗು ಹೆಚ್ಚಿಸಿತು. ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net