ಬಹಳ ವರ್ಷಗಳ ಹಿಂದೆ ಖಾಪ್ರಿ ಎಂಬ ನಿಗ್ರೋ ಕಾರವಾರ ಭಾಗದಲ್ಲಿ ವಾಸವಿದ್ದರು. ಜನಾನುರಾಗಿಯಾಗಿದ್ದ ಖಾಪ್ರಿ ಧರ್ಮ ಬೇಧ ಮರೆತು ಎಲ್ಲ ಜನರಿಗೆ ಬೇಕಾದ ಕೆಲಸ ಮಾಡಿಕೊಡುತ್ತಿದ್ದರು. ಒಂದು ದಿನ ಮೃತಪಟ್ಟ ಅವರನ್ನು ದಫನ್ ಮಾಡಲಾಯಿತು. ಆದರೆ, ಸ್ಥಳೀಯ ಹಿಂದು ಮುಖಂಡರೊಬ್ಬರ ಹಿರಿಯರೊಬ್ಬರ ಕನಸಿನಲ್ಲಿ ಬಂದ ಖಾಪ್ರಿ ಬರುತ್ತಿದ್ದರು. ದಫನ್ ಮಾಡಿದ ಜಾಗದಲ್ಲಿ ತೆಗೆದು ನೋಡಿದಾಗ ಅವರ ಮೃತ ದೇಹ ಇರಲಿಲ್ಲ. ಆದರೆ, ನಂತರ ಊರಿನಲ್ಲಿ ಹಲವು ಪವಾಡಗಳು ನಡೆಯುತ್ತಿದ್ದವು.ಅದಕ್ಕೆಲ್ಲ ಖಾಪ್ರಿ ಅವರೇ ಕಾರಣ ಎಂದು ನಂಬಿದ ಊರ ಹಿರಿಯರು ಖಾಪ್ರಿ ಅವರನ್ನು ದೇವರು ಎಂದು ಆರಾಽಸಲಾರಂಭಿಸಿದರು. ಗುಡಿ ಕಟ್ಟಿ , ನಿಯಮಿತವಾಗಿ ಪೂಜಿಸಿದರು. ವರ್ಷಕ್ಕೊಮ್ಮೆ ಜಾತ್ರೆಯ ಸಂದರ್ಭದಲ್ಲಿ ಅವರಿಗೆ ಇಷ್ಟವಾದ ಮದ್ಯ, ಸಿಗರೇಟು, ಮಾಂಸವನ್ನು ನೀಡಿದರು. ಭಕ್ತಿಯಿಂದ ಹರಕೆ ಹೇಳಿಕೊಂಡಲ್ಲಿ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಕಾರವಾರ ಜನರ ನಂಬಿಕೆ.