ಕಾರವಾರದಲ್ಲಿದ್ದ ಖದೀಮನಿಗೆ ಗೋವಾದಲ್ಲಿ 300 ಕೋಟಿ ರೂ. ಆಸ್ತಿ !!

ಸಿದ್ದಿಕ್‌ ಖಾನ್‌
ಸಿದ್ದಿಕ್‌ ಖಾನ್‌
Published on

ಪ್ರಮುಖ ಮುಖ್ಯಾಂಶಗಳು

  • ಕಾರವಾರದ ಕೋಡಿಬಾಗದಲ್ಲಿ ನಾಲ್ಕು ಫ್ಲಾಟ್‌ ಹೊಂದಿದ್ದ ವ್ಯಕ್ತಿ
  • ಮೃತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಗೋವಾದಲ್ಲಿ ಭೂಮಿ
  • ಗೋವಾದಲ್ಲಿ 25 ಹಕ್ಟೇರ್‌ ಭೂಮಿ ಹೊಂದಿದ್ದ
ಕಾರವಾರ: ನಕಲಿ ದಾಖಲೆ ಸೃಷ್ಟಿಸಿ ಹಣ ವರ್ಗಾವಣೆ ಪ್ರಕರಣದಲ್ಲಿ ಕಾರವಾರದಲ್ಲಿ ನೆಲೆಸಿದ್ದ ವ್ಯಕ್ತಿಯನ್ನು ಗೋವಾ ಜಾರಿ ನಿರ್ದೇಶನಾಲಯ ಶುಕ್ರವಾರ (ಇಡಿ) ಬಂಧಿಸಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಐದು ದಿನಗಳ ಕಸ್ಟಡಿಗೆ ಪಡೆದಿದೆ.
ಸುಲೇಮಾನ್ ಖಾನ್ ಹೆಸರಿನಿಂದ ಪರಿಚಿತನಾಗಿದ್ದ ಸಿದ್ದಿಕ್ ಖಾನ್ ಶಿವಮೊಗ್ಗ ಮೂಲ ಎಂದು ಹೇಳಿಕೊಂಡು ಕಾರವಾರಕ್ಕೆ ಬಂದಿದ್ದ. ಸುಮಾರು ಐದು ವರ್ಷ ಇಲ್ಲಿ ನೆಲೆಸಿದ್ದ. ಕಾರವಾರದ ಕೋಡಿಬಾಗದ ಅಬಕಾರಿ ಕಚೇರಿಯ ಎದುರು ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದ. ನಂತರ ಕುಟುಂಬವನ್ನು ಕಾರವಾರದಲ್ಲಿಸಿರಿ ಗೋವಾಕ್ಕೆ ಸ್ಥಳಾಂತರಗೊಂಡಿದ್ದ. ಗೋವಾದದ ವಿವಿಧೆಡೆ ನಕಲಿ ದಾಖಲೆ ಸೃಷ್ಟಿಸಿ ಸುಮಾರು 300 ಕೋಟಿಗೂ ಅಽಕ ಮೌಲ್ಯದ 25 ಹೆಕ್ಟೇರ್ ಭೂಮಿಯನ್ನು ಹೊಂದಿದ್ದ ಎನ್ನಲಾಗಿದೆ.

ನಕಲಿ ದಾಖಲೆ ಸೃಷ್ಟಿ

ಸಿದ್ದಿಕ್ ಖಾನ್ ಹಾಗೂ ಆತನ ಜಾಲವು ಮೃತ ಅಥವಾ ಅಸ್ತಿತ್ವದಲ್ಲಿಲ್ಲದ ಪೂರ್ವಜರ ಹೆಸರಿನಲ್ಲಿ ಹಲವಾರು ನಕಲಿ ದಾಖಲೆಗಳು ಮತ್ತು ಹಿಂದಿನ ದಿನಾಂಕದ ಕ್ರಯಪತ್ರಗಳು ಹಾಗೂ ಮಾಲೀಕತ್ವದ ದಾಖಲೆಗಳನ್ನು ಸೃಷ್ಟಿಸಿ ಭೂಮಿಯನ್ನು ಒಳ ಹಾಕಿತ್ತು ಎಂದು ಇಡಿ ಪ್ರಕಟಣೆ ತಿಳಿಸಿದೆ.
2024 ರಲ್ಲಿ ಗೋವಾ ಎಸ್‌ಐಟಿ ತಂಡ ಆತನನ್ನು ಇದೇ ವಿಚಾರವಾಗಿ ಬಂಽಸಿತ್ತು. ಆದರೆ, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಆತ ಕಾರವಾರ ಮೂಲಕ ಹುಬ್ಬಳ್ಳಿಗೆ ಪರಾರಿಯಾಗಿದ್ದ. ಅಲ್ಲಿಂದ ಕೇರಳಕ್ಕೆ ಹೋಗಿದ್ದ ಆತನನ್ನು ಮರಳಿ ಬಂಽಸಲಾಗಿತ್ತು. ಈ ಸಂದರ್ಭದಲ್ಲಿ ಗೋವಾ ಎಸ್‌ಐಟಿ ತಂಡವು ಕಾರವಾರದಲ್ಲಿರುವ ಸಿದ್ದಿಕ್ ಖಾನ್‌ನ 4 ಫ್ಲಾಟ್‌ಗಳನ್ನು ಸೀಜ್ ಮಾಡಿತ್ತು. ಮತ್ತು ಫ್ಲಾಟ್ ಒಳಗೆ ಲುಕ್‌ಔಟ್ ನೋಟಿಸ್ ಅಂಟಿಸಿತ್ತು.
ಬಹು ಕೋಟಿ ರೂ. ಹಗರಣ ಇದಾಗಿದ್ದರಿಂದ ಇಡಿ ಅಂಕಣಕ್ಕೆ ಇಳಿದಿದೆ. ಆತನ ವಿರುದ್ಧ ಗೋವಾ ಎಸ್‌ಐಟಿ ದಾಖಲಿಸಿರುವ ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಸ್ಥಿರ ಆಸ್ತಿಗಳ ವರ್ಗಾವಣೆ ಪ್ರಕರಣಗಳನ್ನು ಆಧರಿಸಿ ಇಡಿ ಈಗ ವಿಚಾರಣೆಗೆ ಇಳಿದಿದೆ. ಗೋವಾ ಎಸ್‌ಐಟಿ ಈಗಾಗಲೇ ಈ ವಿಷಯವಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net