ಜೈಲಿನಲ್ಲಿದ್ದವರ ಮೇಲೆ ಹಲ್ಲೆ ಮಾಡಲು ಹೊರಗಿನಿಂದ ಸುಪಾರಿ

ಕಾರವಾರ ಜೈಲು
ಕಾರವಾರ ಜೈಲು
Published on

ಪ್ರಮುಖ ಮುಖ್ಯಾಂಶಗಳು

  • ಮುರ್ಡೇಶ್ವರ ಪ್ರಕರಣದ ಆರೋಪಿಗಳ ಮೇಲೆ ಹಲ್ಲೆ ನಡೆಸಲು ಹೊರಗಿನಿಂದ ಸುಪಾರಿ
  • ಜೈಲಿನೊಳಗೆ ದೋಸ್ತಿ ಮಾಡಿಕೊಂಡು ಬಂದು ಹೊರಗಿನಿಂದ ಸುಪಾರಿ
ಕಾರವಾರ: 

ಕೇಂದ್ರ ಕಾರಾಗೃಹಗಳಲ್ಲಿ ಗೂಂಡಾಗಿರಿ, ಅಕ್ರಮ ಮಾದಕ ದ್ರವ್ಯ ಚಟುವಟಿಕೆಗಳು ಸಾಮಾನ್ಯ. ಜೈಲ್‌ನಿಂದಲೇ ಕ್ರೈಮ  ಸ್ಕೆಚ್, ಸುಪಾರಿ ನೀಡಿದ ಉದಾಹರಣೆಗಳೂ ಸಾಕಷ್ಟಿವೆ. ಆದರೆ, ಇತ್ತೀಚೆಗೆ ಕಾರವಾರ ಜೈಲ್‌ನಲ್ಲೂ ಅಂಥ ಸುಪಾರಿ ಕೃತ್ಯಗಳು ಹೆಚ್ಚುತ್ತಿವೆ. 

ಕಳೆದ ವಾರ ಎರಡು ಗುಂಪುಗಳ ನಡುವೆ ಕಾರಾಗೃಹದಲ್ಲಿ ಗಲಾಟೆ ನಡೆದ ಮಾಹಿತಿ ಲಭ್ಯವಾಗಿದೆ. ಜೈಲಿನಿಂದ ಹೊರಗಿದ್ದ ವ್ಯಕ್ತಿಯೊಬ್ಬ ಹಲ್ಲೆಗೆ ಸುಫಾರಿ ನೀಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ. ಜೈಲಿನಿಂದ ಕೆಲ ದಿನಗಳ ಹಿಂದೆ ಬಿಡುಗಡೆಯಾದ ಜಯಂತ ನಾರಾಯಣ ನಾಯ್ಕ, ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ನಾಗೇಶ ರವಿ ಪೂಜಾರಿ, ಆನಂದ್, ಫೈರೋಜ್ ಯಾಸಿನ್ ಯರಗಟ್ಟಿ, ದೇವೇಂದ್ರ ನಾಗೇಶ ಸಿದ್ದಿ ವಿರುದ್ಧ ಜಿಲ್ಲಾ ಕಾರಾಗೃಹದ ಸುಪರಿಂಟೆಂಡೆಂಟ್ ಹೇಮಾವತಿ ಜಿ.ಅವರು ಕಾರವಾರ ಶಹರ ಠಾಣೆಗೆ ದೂರು ನೀಡಿದ್ದಾರೆ. 

ಹೊರಗಿನಿಂದ ಸುಪಾರಿ..? 

ಮುರ್ಡೇಶ್ವರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಬಂಧಿತರಾಗಿ ಬಂದಿರುವ ಐದು ಜನರ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸುವಂತೆ ಜಯಂತ ನಾಯ್ಕ ಜೈಲ್‌ನ ಹೊರಗಿನಿಂದಲೇ ಒಳಗಿರುವ ನಾಗೇಶ ಪೂಜಾರಿ, ಆನಂದ್, ಪೈರೋಜ್, ಹಾಗೂ ದೇವೇಂದ್ರ ಸಿದ್ದಿ ಎಂಬುವವರಿಗೆ ಸುಪಾರಿ ನೀಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಿಸನ್ ಕಾಲ್ ಸಿಸ್ಟಂನಲ್ಲಿ ಆರೋಪಿಗಳ ಮಾತುಕತೆ ದಾಖಲಾಗಿದ್ದು, ಅದರ ಆಧಾರದ ಮೇಲೆ ಜೈಲರ್ ದೂರು ನೀಡಿದ್ದು, ತನಿಖೆ ನಡೆದಿದೆ. 

ಹಿಂದೆಯೂ ನಡೆದಿತ್ತು: 

ಮಾದಕ ವಸ್ತುಗಳನ್ನು ನೀಡುವಂತೆ ಕೈದಿಗಳಿಬ್ಬರು ಗಲಾಟೆ ನಡೆಸಿ, ನಂತರ ಪರಸ್ಪರ ಹೊಡೆದಾಡಿಕೊಂಡ ಘಟನೆ ಜೈಲ್‌ನಲ್ಲಿ ನಡೆದಿತ್ತು. ಕೆಲ ಗೂಂಡಾಗಳು ಜೈಲರ್ ಹಾಗೂ ಸಿಬ್ಬಂದಿಯ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ 2025 ರ ಡಿಸೆಂಬರ್‌ನಲ್ಲಿ ನಡೆದಿತ್ತು. ಕೆಲ ದಿನಗಳ ನಂತರ ಕಾರವಾರ ಜೈಲಿನಲ್ಲಿ ಪೊಲೀಸರು ದಾಳಿ ನಡೆಸಿದಾಗ ಮೊಬೈಲ್‌ಗಳು ಪತ್ತೆಯಾಗಿದ್ದವು. 

ಏನಿದು ಪ್ರಿಸನ್ ಕಾಲ್ ಸಿಸ್ಟಂ..?

ಜೈಲು ಕೈದಿಗಳು ತಮ್ಮ ಕುಟುಂಬಸ್ಥರು ಮತ್ತು ವಕೀಲರ ಜೊತೆ ಮಾತನಾಡಲು ಪ್ರಿಸನ್ ಕಾಲ್ ಸಿಸ್ಟಂ ಎಂಬ ನಿರ್ಬಂಽತ ಸಂಪರ್ಕ ವ್ಯವಸ್ಥೆ ಇದೆ. ತಮ್ಮ ಕುಟುಂಬಸ್ಥರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಮಾತ್ರ ಕೈದಿಗಳು ನಿಗದಿತ ಸಮಯಮಿತಿಗೆ ಒಳಪಟ್ಟು ಕರೆ ಮಾಡಬಹುದು. ಆದರೆ, ಪ್ರತಿ ಕರೆಗಳೂ ರೆಕಾರ್ಡ್ ಆಗುತ್ತವೆ. ಮತ್ತು ಪರಿಶೀಲನೆಗೊಳಪಡುತ್ತವೆ. 
ನಿಯಮದಂತೆ ವಿಚಾರಣಾಧೀನ ಕೈದಿಯೊಬ್ಬನಿಗೆ ಆತನ ಕುಟುಂಬದ ನೋಂದಾಯಿತ ಸಂಖ್ಯೆಯಿಂದ ಕರೆ ಸ್ವೀಕರಿಸಿ ಮಾತನಾಡಲು ಅವಕಾಶ ನೀಡಲಾಗಿತ್ತು. ಆದರೆ, ಆ ವೇಳೆ ಜಯಂತ್ ನಾಯ್ಕ ಕಾನರೆನ್ಸ್ ಕಾಲ್‌ನಲ್ಲಿದ್ದು, ಜೈಲಿಗೆ ಬರುವ ತಮ್ಮ ವಿರೋಧಿ ತಂಡದ ಮೇಲೆ ಹಲ್ಲೆ ನಡೆಸುವಂತೆ ಸೂಚಿಸಿದ್ದ ಎನ್ನಲಾಗಿದೆ. ಜಯಂತ್ ನಾಯ್ಕ ಪ್ರಕರಣವೊಂದರಲ್ಲಿ ಬಂಽತನಾಗಿ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿದ್ದ. ಒಳಗಿದ್ದಾಗ ಸಹ ಕೈದಿಗಳ ಜೊತೆ ಸ್ನೇಹ ಬೆಳೆಸಿಕೊಂಡಿದ್ದ ಎನ್ನಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net