ಪೊಳೆಂ ಕಡಲ ತೀರದಲ್ಲಿ ಕಾರವಾರ ಡಿಪ್ಲೊಮಾ ಕಾಲೇಜ್‌ ವಿದ್ಯಾರ್ಥಿ ನಾಪತ್ತೆ

ವಿಘ್ನೇಶ್ವರ
ವಿಘ್ನೇಶ್ವರ
Published on
ಕಾರವಾರ: ಗೋವಾದ ಕಡಲ ತೀರದಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ. ಅಂಕೋಲಾ ತಾಲೂಕಿನ ಬೇಳಾ ಬಂದರಿನ ನಿವಾಸಿ, ಕಾರವಾರ ಸರ್ಕಾರಿ ಡಿಪ್ಲೋಮಾ ಕಾಲೇಜ್‌ನ ದ್ವಿತೀಯ ವರ್ಷದ ವಿದ್ಯಾರ್ಥಿ ವಿಘ್ನೇಶ್ವರ ಪ್ರಕಾಶ ನಾಯ್ಕ(20) ನಾಪತ್ತೆಯಾದ ವಿದ್ಯಾರ್ಥಿ.
ಶುಕ್ರವಾರ ಇಬ್ಬರು ಸ್ನೇಹಿತರ ಜೊತೆ ಪೊಳೆಂ ತೀರಕ್ಕೆ ತೆರಳಿದ್ದ, ಈಜುವಾಗ ಅಲೆಗಳ ರಭದಕ್ಕೆ ಸಿಲುಕಿ ನಾಪತ್ತೆಯಾಗಿದ್ದಾನೆ. ಶುಕ್ರವಾರ ಹಾಗೂ ಶನಿವಾರ ಸಾಕಷ್ಟು ಹುಡುಕಾಟ ನಡೆಸಲಾಗಿದೆ.
ಕಾಣಕೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣಕೋಣ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯ ಪೊಲೀಸರ ಜೊತೆ ಹುಡುಕಾಟ ನಡೆಸಿದರು. ಅಲ್ಲದೇ, ಕೋಸ್ಟ್ ಗಾರ್ಡ್ ಹೆಲಿಕಾಫ್ಟರ್ ಹಾಗೂ ಬೋಟ್‌ಗಳನ್ನೂ ಸಹ ಬಳಸಲಾಯಿತು. ಆದರೆ, ಯಾವುದೇ ಮಾಹಿತಿ ದೊರೆತಿಲ್ಲ. ದೇಹ, ದೇವಬಾಗ, ಮಾಜಾಳಿ ಭಾಗಕ್ಕೆ ಹೋಗಿರುವ ಸಾಧ್ಯತೆಯೂ ಇದ್ದು, ಮೀನುಗಾರಿಕೆಗೆ ತೆರಳುವ ಮೀನುಗಾರಿಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ತಕ್ಷಣ 7875756047 ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸುವಂತೆ ಕಾಣಕೋಣ ಪೊಲೀಸ್ ಠಾಣೆಯ ಅದಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net