ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಮಾಡಿ ಸಂತೋಷವಾಗಿದೆ. ಶಾಸಕ ಸತೀಶ ಸೈಲ್, ಹಾಗೂ ಸಚಿವ ಮಂಕಾಳ ವೈದ್ಯ ವಿನಂತಿಸಿದ್ದರು. ಈಗಾಗಲೇ ಬಜೆಟ್ ಸಂಬಂಧ ಚರ್ಚೆಯಲ್ಲಿ ಸಚಿವ ಶರಣಪ್ರಕಾಶ ಪಾಟೀಲ ಅವರು ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ವಿಚಾರ ಹೇಳಿದ್ದು, ಅದನ್ನು ಪಟ್ಟಿಯಲ್ಲಿ ಸೇರಿಸಿಕೊಂಡಿದ್ದೇವೆ. ಇನ್ನು ಮುಂದೆ ಇಲ್ಲಿನ ಜನ ಹೆಚ್ಚಿನ ಚಿಕಿತ್ಸೆಗೆ ಉಡುಪಿ, ಮಂಗಳೂರು, ಧಾರವಾಡ ಜಿಲ್ಲೆಗಳಿಗೆ ಹೋಗುವುದು ತಪ್ಪಲಿದೆ ಎಂದರು.