ನಗರದ ಯೋಗ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನೀರೇ ಇಲ್ಲದ ನೀರಾವರಿ ಯೋಜನೆಯಾಗಿದೆ. ಮಲೆನಾಡು, ಕರಾವಳಿ ಪರಸರ, ಮೀನುಗಾರರು ಹಾಗೂ ರೈತರ ಬದುಕಿಗೆ ಮಾರಕವಾಗಿದೆ. ಯಲ್ಲಾಪುರ, ಶಿರಸಿ ತಾಲೂಕುಗಳ ಪಟ್ಟಣದಹೊಳೆ, ಶಾಲ್ಮಲಾ, ಬೇಡ್ತಿ ನದಿಗಳ ನೀರು ಸ್ಥಳೀಯರ ಬಳಕೆಗೆಬೇಕು. ಮಾಗೋಡು ಜಲಪಾತ ನಂತರ ಬೇಡ್ತಿ, ಗಂಗಾವಳಿ ನದಿ ಕರೆಸಿಕೊಂಡಿದೆ. ಗಂಗಾವಳಿ ನದಿಯಿಂದ ಕಾಳಿ ಪುನರ್ ವಸತಿಗೆ ಒಳಗಾದ ಹಳ್ಳಿಗಳಿಗೆ, ಗೋಕಾರ್ಣಕ್ಕೆ, ಅಂಕೋಲಾಕ್ಕೆ, ಕಾರವಾರ ಹಾಗೂ ನೌಕಾನೆಲೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇತ್ತೀಚಿನ ಹಲವು ವರ್ಷಗಳಲ್ಲಿ ಬೇಸಿಗೆಯಲ್ಲಿ ಗಂಗಾವಳಿ ನದಿ ಪೂರ್ಣ ಬರಿದಾಗುತ್ತಿದೆ. ಅಂಕೋಲಾ ತಾಲೂಕಿನ ರೈತರು ಮೀನುಗಾರರು ಗಂಗಾವಳಿ ನದಿಯನ್ನೇ ನಂಬಿಕೊAಡಿದ್ದಾರೆ. ಬೇಡ್ತಿ ವರದಾ ಯೋಜನೆ ಜಾರಿಯಾದರೆ ಕಾರವಾರ, ಅಂಕೋಲಾ, ಕುಮಟಾ ತಾಲೂಕುಗಳ ಜನತೆ ತೀವ್ರ ಜಲ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ನದಿ ಜೋಡಣೆ ಯೋಜನೆ ವಿರುದ್ಧ ಹಕ್ಕೋತ್ತಾಯ ಮಾಡಲಾಗುತ್ತಿದೆ ಎಂದರು.