ನಮಗೆ ಗ್ಯಾರಂಟಿ ಬೇಡ ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ನೀಡಿ

ಪ್ರತಿಭಾವಂತ ವಿದ್ಯಾರ್ಥಿಯನ್ನು ಭಾನುವಾರ ಸನ್ಮಾನಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಯನ್ನು ಭಾನುವಾರ ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿಕೆ
  • ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ
ಕಾರವಾರ:

ನಮಗೆ ಗ್ಯಾರಂಟಿ ಬೇಡ ಹಳೆಯ ಪಿಂಚಣಿ ಪದ್ಧತಿ ಹಾಗೂ ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ನೀಡಿ ಎಂದು ಸರ್ಕಾರದ ಬಳಿ ಹೇಳಿದ್ದೇನೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲಾ ಹಾಗೂ ಶಿರಸಿ ಶಾಖೆಯಿಂದ ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎನ್‌ಪಿಎಸ್ ಪದ್ಧತಿಯಿಂದ 2.93 ಲಕ್ಷ ನೌಕರರು ಆತಂಕದಲ್ಲಿದ್ದಾರೆ. ಹಾಗಾಗಿ ಒಪಿಎಸ್‌ಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಕೇಂದ್ರ ಸರ್ಕಾರ 8 ನೇ ವೇತನ ಆಯೋಗ ಜಾರಿ ಮಾಡಿದ ತಕ್ಷಣ ನಮ್ಮ ವೇತನವನ್ನೂ ಹೆಚ್ಚಿಸಬೇಕು ಎಂದು 7 ನೇ ವೇತನ ಆಯೋಗದಲ್ಲೇ ಹೇಳಲಾಗಿದೆ ಎಂದರು. ನಾವು ಕರೆ ಕೊಟ್ಟರೆ ಇಡೀ ಆಡಳಿತ ವ್ಯವಸ್ಥೆ ಬಂದ್ ಆಗುತ್ತದೆ. ಸರ್ಕಾರಕ್ಕೂ ಅದು ಗೊತ್ತಿದೆ ಎನ್ನುವ ಮೂಲಕ ಸೂಕ್ಷ್ಮ ಎಚ್ಚರಿಕೆಯನ್ನೂ ನೀಡಿದರು.

ಸಂಸ್ಕಾರವಂತರಾಗಿ

ಶೇ.100 ರಷ್ಟು ಅಂಕ ಪಡೆದರೂ ಇಂದು ಸಾಕಾಗುವುದಿಲ್ಲ ಎಂಬಷ್ಟು ಪೈಪೋಟಿ ಇದೆ. ಇಂದು ಹಣಕ್ಕೆ ಬೆಲೆ ಇಲ್ಲ. ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರಗಳ ನಡುವೆ ನಾವು ಕೆಲಸ ಮಾಡಬೇಕಿದೆ. ಈ ಎಲ್ಲವುಗಳ ನಡುವೆ ನಾಡು, ನುಡಿ, ದೇಶ, ಪಾಲಕರು, ಸಮಾಜದ ಬಗ್ಗೆ ಬದ್ಧತೆ ಹೊಂದಿರುವವರಾಗಿ ಯಶಸ್ಸು ಸಿಕ್ಕಿದ ಮೇಲೆ ಕುಟುಂಬಕ್ಕೆ ಸೀಮಿತರಾಗದೇ ಸಮಾಜಕ್ಕೆ ಕೊಡುಗೆ ನೀಡಿ. ಸಮಾಜಮುಖಿಯಾಗಿ ಚಿಂತನೆ ಮಾಡಿ. ನಾಡಿನ ಸಂಸ್ಕೃತಿ ಉಳಿಸುವ ಯುವ ನಾಯಕರಾಗಿ ಬೆಳೆಯಿರಿ. ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸತೀಶ ಸೈಲ್, ಕೇವಲ ಅಂಕ ಪಡೆದರೆ ಸಾಧ್ಯವಾಗದು. ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ಧೈರ್ಯದಿಂದ ಮಾತನಾಡುವುದನ್ನು ಕಲಿತುಕೊಳ್ಳಿ. ಕೆಟ್ಟ ಚಟಗಳಿಗೆ ಬಲಿಯಾಗಬೇಡಿ ಎಂದರು. ಡಿಸಿ ಕೆ.ಲಕ್ಷಿ÷್ಮÃಪ್ರಿಯಾ ಮಾತನಾಡಿ, ಶಿಕ್ಷಣದ ಜೊತೆ ವ್ಯಕ್ತಿತ್ವ ಬೆಳೆಸಿಕೊಂಡಾಗ ಏನೇ ಬಂದರೂ ಎದುರಿಸುವ ಧೈರ್ಯ ರೂಪುಗೊಳ್ಳುತ್ತದೆ ಎಂದರು. ಜಿಪಂ ಸಿಇಒ ಡಾ.ದಿಲೀಶ್ ಶಶಿ ಮಾತನಾಡಿ, ಮಕ್ಕಳಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳಿಸಿ ಎಂದರು.
ಸಂಘದ ಕಾರ್ಯಾಧ್ಯಕ್ಷ ಶಂಭುಗೌಡ ಎಸ್., ಹಿರಿಯ ಉಪಾಧ್ಯಕ್ಷ ಸೋಮಶೇಖರಯ್ಯ, ಉಪಾಧ್ಯಕ್ಷ ರಾಜೇಶ, ಶಿವಾನಂದ ಎಲ್ಲ ತಾಲೂಕು ಅಧ್ಯಕ್ಷರು ವೇದಿಕೆಯಲ್ಲಿದ್ದರು. ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಸಂಜೀವ ಕುಮಾರ್ ನಾಯ್ಕ ಸ್ವಾಗತಿಸಿದರು. ಶಿರಸಿ ಅಧ್ಯಕ್ಷ ಕಿರಣ ಕುಮಾರ್ ನಾಯ್ಕ ವಂದಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಅಂಕ ಪಡೆದ ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ತನ್ಮಯಾ ಸುದರ್ಶನ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ ಎಲ್ಲ ಮಕ್ಕಳಿಗೆ, ತಲಾ 2 ಸಾವಿರ ರೂ. ಬ್ಯಾಗ್, ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಶೇ.100 ಫಲಿತಾಂಶ ಪಡೆದ ಎಲ್ಲ ಸರ್ಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕರನ್ನು ಸನ್ಮಾನಿಸಲಾಯಿತು.

ಶಿಕ್ಷೆಗೊಳಗಾದವ್ರು ಮಾತ್ರ ಬರ್ತಾರೆ:

ಉತ್ತರ ಕನ್ನಡ ಜಿಲ್ಲೆಗೆ ಅಽಕಾರಿಗಳು ಬರಲೊಪ್ಪುವುದಿಲ್ಲ ಎಂದ ಷಡಾಕ್ಷರಿ ಅವರು. ಫನೀಶ್‌ಮೆಂಟ್ ಟ್ರಾನ್ಸ್ಫರ್ ಆದವ್ರು ಮಾತ್ರ ಇಲ್ಲಿಗೆ ಬರಬಹುದು. ಹಾಗಾಗಿ ರಾಜ್ಯದಲ್ಲಿ ಅತಿ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇರುವ ಜಿಲ್ಲೆ ಉತ್ತರ ಕನ್ನಡವಾಗಿದೆ. ಆದರೆ, ಇಲ್ಲಿರುವ ನೌಕರರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net