ಕಾರವಾರ: ಕರ್ನಾಟಕ ಮೆರಿಟೈಮ್ ಬೋರ್ಡ್(ಕೆಎಂಬಿ) ಆಡಳಿತ ವ್ಯವಸ್ಥೆ ಸರಿದಾರಿಗೆ ತರುವ ಕಾರ್ಯ ಮಾಡಲಾಗುತ್ತಿದೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು. ದೇಶದ ವಿವಿಧ ಕರಾವಳಿ ರಾಜ್ಯಗಳಲ್ಲಿ ಇದ್ದಂತೆ ಕರ್ನಾಟಕದಲ್ಲೂ ಮೆರಿಟೈಮ್ ಬೋರ್ಡ್ ರಚನೆ ಮಾಡಲಾಗಿದೆ. ಆದರೆ, 8 ವರ್ಷ ಕಳೆದರೂ ಅಲ್ಲಿ ಇದುವರೆಗೂ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ.