ಕರಾವಳಿ ಉತ್ಸವ: ಘಮಘಮಿಸಿದ ಅಡುಗೆಗಳು

ಕರಾವಳಿ ಉತ್ಸವದ ಅಡುಗೆ ಸ್ಪರ್ಧೆಯಲ್ಲಿ ಗಮನ ಸೆಳೆದ ಮೀನು ಫ್ರೈ
ಕರಾವಳಿ ಉತ್ಸವದ ಅಡುಗೆ ಸ್ಪರ್ಧೆಯಲ್ಲಿ ಗಮನ ಸೆಳೆದ ಮೀನು ಫ್ರೈ
Published on
ಕಾರವಾರ: ನಗರದ ಮಾಲಾದೇವಿ ಮೈದಾನದಲ್ಲಿ ಕರಾವಳಿ ಶೈಲಿಯ ತರಹೇವಾರು ಅಡುಗಳು ಗಮನ ಸೆಳೆದವು. ಪುರುಷರು ಮಹಿಳೆಯರು ಎನ್ನದೇ 50 ಕ್ಕೂ ಹೆಚ್ಚು ಅಭ್ಯಥಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಶಾಖಾಹಾರಿ ಹಾಗೂ ಮಾಂಸಹಾರಿ ಖಾದ್ಯಗಳು ನೋಡುಳ ಬಾಯಲ್ಲಿ ನೀರೂರಿಸಿದವು. ಕರಾವಳಿ ಶೈಲಿಯ ಮೀನಿನ ಸಾರು, ಫ್ರೈ ಮಸಾಲಾ ಬಂಗಡೆ ಹಾಗೂ
ಸಸ್ಯಹಾರಿ ಅಡುಗೆಗಳನ್ನು ಸವಿಯಲು ಪ್ರೇಕ್ಷಕರು ಮುಗಿಬಿದ್ದರು. ತಟ್ಟೆಯಲ್ಲಿ ವಿಶೇಷವಾಗಿ ಪ್ರಸ್ತುತ ಪಡಿಸಿದ ಎಲ್ಲಾ ಅಡುಗೆಗಳ ರುಚಿ ನೋಡಿದ ನಿರ್ಣಾಯಕರು ತೀರ್ಪು ನೀಡಿದರು.

ವಿಜೇತರು

ಮಾಂಸಹಾರಿ ಅಡುಗೆ ಸ್ಪರ್ಧೆಯಲ್ಲಿ ಅಸ್ನೋಟಿ ಪ್ರಸಾದ ವಿ ಸಾಳುಂಕೆ ಪ್ರಥಮ, ಕಾರವಾರದ ಹೊಸಳಿ ನಜರಿನ ಶೇಖ್
ದ್ವಿತೀಯ, ಶುಭಾಂಗಿ ಮಂಜುನಾಥ ಶಿರೋಡಕರ ತೃತೀಯ ಬಹಮಾನ ಪಡೆದುಕೊಂಡರು. ಶಾಖಾಹಾರಿ ಅಡುಗೆ ಸ್ಪರ್ಧೆಯಲ್ಲಿ ಕ್ರೀಮ್ಸ್ ಕ್ಯಾಂಪಸ್‌ನ ಶ್ವೇತಾ ಕೆ.ಎಸ್ ಪ್ರಥಮ, ಮಾಜಾಳಿಯ ಅಶ್ವಿನಿ ಅಶೋಕ ಕುಲಕರ್ಣಿ ದ್ವಿತೀಯ, ಯಲ್ಲಾಪುರ ಅಂಬೇಡ್ಕರ್ ನಗರದ ರೂಪಾ ಪಟನಕರ ತೃತೀಯ ಬಹಮಾನ ಪಡೆದುಕೊಂಡರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಅಡುಗೆ ಸ್ಪರ್ಧೆಯನ್ನು ವಿಕ್ಷಿಸಿ ಕೆಲವು ಆಹಾರವನ್ನು ಸವಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಮತ್ತಿತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net