ಭದ್ರತಾ ಸಮಿತಿಯ ಅಧ್ಯಕ್ಷರಾಗಿ ಪೊಲೀಸ್ ಅಧೀಕ್ಷಕರು, ಕಾರವಾರ ಮತ್ತು ಮತ್ತು ಸದಸ್ಯ ಕಾರ್ಯದರ್ಶಿಯನ್ನಾಗಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು(2) ಅಪರಾಧ ಮತ್ತು ಸಂಚಾರಿ ವಿಭಾಗ, ಕಾರವಾರ ಅವರನ್ನು ನೇಮಿಸಲಾಗಿದ್ದು, ಆರೋಗ್ಯ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕಾರವಾರ ಹಾಗೂ ಸದಸ್ಯ ಕಾರ್ಯದರ್ಶಿಯನ್ನಾಗಿ ತಾಲೂಕು ಆರೋಗ್ಯಾಧಿಕಾರಿ ಕಾರವಾರ ಅವರನ್ನು ನೇಮಿಸಿಲಾಗಿದೆ. ವಿದ್ಯುತ್ ಮತ್ತು ನೀರು ಸರಬರಾಜು ಹಾಗೂ ನೈರ್ಮಲ್ಯ ಹಾಗೂ ಅಲಂಕಾರ ಸಮಿತಿಯ ಅಧ್ಯಕ್ಷರಾಗಿ ಆಯುಕ್ತರು, ನಗರಸಭೆ, ಕಾರವಾರ ಹಾಗೂ ಸದಸ್ಯ ಕಾರ್ಯದರ್ಶಿಯನ್ನಾಗಿ ಕಿರಿಯ ಅಭಿಯಂತರರು (ವಿದ್ಯುತ) ನಗರಸಭೆ, ಕಾರವಾರ ಅವರನ್ನು ನೇಮಿಸಲಾಗಿದೆ.