ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ‘ಕಂಸ ದಿಗ್ವಿಜಯ’

ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಪ್ರದರ್ಶನಗೊಂಡ ‘ಕಂಸ ದಿಗ್ವಿಜಯ’ ಯಕ್ಷಗಾನದಲ್ಲಿ ಡಾ.ಜಿ.ಎ. ಹೆಗಡೆ ಸೋಂದಾ ಹಾಗೂ ನಾಟ್ಯಾಚಾರ್ಯ ಶಂಕರ ಭಟ್ಟ ಸಿದ್ದಾಪುರ ಅವರು ಪಾತ್ರ ನಿರ್ವಹಿಸಿದರು.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಪ್ರದರ್ಶನಗೊಂಡ ‘ಕಂಸ ದಿಗ್ವಿಜಯ’ ಯಕ್ಷಗಾನದಲ್ಲಿ ಡಾ.ಜಿ.ಎ. ಹೆಗಡೆ ಸೋಂದಾ ಹಾಗೂ ನಾಟ್ಯಾಚಾರ್ಯ ಶಂಕರ ಭಟ್ಟ ಸಿದ್ದಾಪುರ ಅವರು ಪಾತ್ರ ನಿರ್ವಹಿಸಿದರು.
Published on
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಹೊಂಗಿರಣ ಫೌಂಡೇಷನ್, ಯಕ್ಷ ಶುಭೋದಯ ಶಿರಸಿ ಅವರಿಂದ ಗುರುವಾರ ಪ್ರದರ್ಶನಗೊಂಡ ‘ಕಂಸ ದಿಗ್ವಿಜಯ’ ಯಕ್ಷಗಾನ ಮೆಚ್ಚುಗೆ ಗಳಿಸಿತು.
ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಶ್ರೀಧರ ಹೆಗಡೆ ಹೊಸ್ತೋಟ, ರಘುಪತಿ ಹೆಗಡೆ ಹೂಡೆಹದ್ದ ಸಹಕರಿಸಿದರು. ಮುಮ್ಮೇಳದಲ್ಲಿ ನಾಟ್ಯಾಚಾರ್ಯ ಶಂಕರ ಭಟ್ಟ ಸಿದ್ದಾಪುರ, ಡಾ.ಜಿ.ಎ. ಹೆಗಡೆ ಸೋಂದಾ, ಪ್ರಸನ್ನ ಹೆಗಡೆ ಹೊಸಗದ್ದೆ, ಭೂಮಿಕಾ ಹೆಗಡೆ ಹೊಸಗದ್ದೆ, ಅಮಿತ್ ಭಟ್ಟ ಮಾಣಿಕ್ಯನಮನೆ ವಿವಿಧ ಪಾತ್ರನಿರ್ವಹಿಸಿದರು. ವಾಸು ನಾಯ್ಕ ಕಿಲಾರ ಪ್ರಸಾದನದಲ್ಲಿ ಸಹಕರಿಸಿದರು.
ಇದೇ ಸಂದರ್ಭದಲ್ಲಿ ನಾಟ್ಯಾಚಾರ್ಯ ಶಂಕರ ಭಟ್ಟ ಅವರನ್ನು ಕಾರ್ಯಕ್ರಮದ ಪ್ರಾಯೋಜಕರಾದ ಸಂತೋಷ ಶೇಟ್ ಕಾನಸೂರು, ಶ್ರೀಕಾಂತ ಶಾನಭಾಗ, ಗುರುಮೂರ್ತಿ ಶಾನಭಾಗ ಅವರು ಸನ್ಮಾನಿಸಿದರು. ವಿ. ಚಂದ್ರಶೇಖರ ಭಟ್ಟ ಗಾಳಿಮನೆ, ಇತರರು ಉಪಸ್ಥಿತರಿದ್ದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net