ಅರ್ಧ ಕಿಮೀ ಉದ್ದದ ಧ್ವಜ ಮೆರವಣಿಗೆ

ಕನ್ನಡ ಧ್ವಜದ ಮೆರವಣಿಗೆ ಗಮನ ಸೆಳೆಯಿತು.
ಕನ್ನಡ ಧ್ವಜದ ಮೆರವಣಿಗೆ ಗಮನ ಸೆಳೆಯಿತು.
Published on
ಕಾರವಾರ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ನಡೆಸಿದ್ದ ಮೆರವಣಿಗೆ ಗಮನ ಸೆಳೆಯಿತು.
ನಗರದ ಮಿತ್ರ ಸಮಾಜದಿಂದ ಬಾಡದವರೆಗೆ ರಥದಲ್ಲಿ ಕನ್ನಡಾಂಬೆಯ ಮೆರವಣಿಗೆ ನಡೆಸಲಾಯಿತು. ಬಿಇಒ ಉಮೇಶ ನಾಯ್ಕ
ಮೆರವಣಿಗೆಗೆ ಚಾಲನೆ ನೀಡಿದರು.
ಕನ್ನಡಾಂಬೆ ಕುಳಿತಿದ್ದ ರಥದ ಮುಂದೆ ಅರ್ಧ ಕಿಮೀ ಉದ್ದದ ಕನ್ನಡ ಧ್ವಜವನ್ನು ಮೆರವಣಿಗೆ ಮಾಡಲಾಯಿತು. ವಿವಿಧ ಕಾಲೇಜ್‌ಗಳ ನೂರಾರು ವಿದ್ಯಾರ್ಥಿಗಳು ಸುಮಾರು 3 ಕಿಮೀ ಕನ್ನಡ ಧ್ವಜ ಹಿಡಿದು ನಡೆದು ಹೋದರು. ಡೊಳ್ಳು ಹಾಗೂ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಸಮ್ಮೇಳನಾಧ್ಯಕ್ಷ ಜಿ.ಡಿ.ಗೋವಿಂದ ಕುಮಾರ್‌, ಶಾಸಕ ಸತೀಶ ಸೈಲ್‌ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್‌.ವಾಸರೆ ಅವರು ಕೆಲ ಕಾಲ ರಥದಲ್ಲಿ ಸಾಗಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಮಾಧವ ನಾಯ್ಕ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net