ಇದೇ ಸಂದರ್ಭದಲ್ಲಿ ಅಂಕೋಲಾದಲ್ಲಿ ಮಂಗನಕಾಯಿಲೆ ನಿಯಂತ್ರಣ ಕಾರ್ಯಕ್ರಮಗಳಿಗೆ ಒಂದು ವಾಹನ ನೀಡುವಂತೆ ಕೈಗಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಡಿಹೆಚ್‌ಓ ಡಾ.ಶಂಕರ ರಾವ್, ಆರ್‌ಸಿಎಚ್. ಅಽಕಾರಿ ಡಾ.ನಟರಾಜ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ರಮೇಶ ರಾವ್ , ಜಿಲ್ಲಾ ಕ್ಷಯರೋಗ ನಿಯಂತ್ರಣಾಽಕಾರಿ ಡಾ. ಹರ್ಷ , ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಲ್ಲಿಕಾರ್ಜುನ್, ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ, ಎನ್‌ಪಿಸಿಐಎಲ್ ಕೈಗಾದ ಹೆಚ್ಚುವರಿ ಮುಖ್ಯ ಇಂಜಿನಿಯರ್ ಹಾಗೂ ಸಿಎಸ್‌ಆರ್ ನಿಧಿ ಅಧಿಕಾರಿ ತಿಪ್ಪೇಸ್ವಾಮಿ, ಕೈಗಾ ನೌಕರರ ಸಂಘದ ಅಧ್ಯಕ್ಷ ಜಗದೀಶ ಗುನಗಾ ಇದ್ದರು.