

ಕಾರವಾರ: ಅವರಿಬ್ಬರದ್ದು, ಹದಿ ಹರೆಯದ ಜೀವ ಆತ್ಮೀಯವಾಗಿ ಪ್ರೀತಿಸಿದ್ದರು. ಕಾಲೇಜ್ ಹಂತದಲ್ಲಿ ಹುಟ್ಟಿಕೊಂಡ ಪ್ರೇಮಾಂಕುರ ಗಿಫ್ಟ್ ಕೊಡುವವರೆಗೆ ಹೋಗಿತ್ತು. ಆದರೆ, ಏನಾಯಿತೋ ತಿಳಿಯದು ಯುವತಿ ಆತ್ಮಹತ್ಯೆ ಮಾಡಿಕೊಂಡಳು. ಈಗ ಇದೇ ವಿಚಾರ ಕಾರವಾರದಲ್ಲಿ ಸಂಚಲನ ಮೂಡಿಸಿದೆ. ಯುವಕನ ಮೇಲೆ ಹಲವು ಅನುಮಾನ ಮೂಡಿಸಿದೆ. ಆರೋಪಗಳು ಕೇಳಿ ಬರುತ್ತಿವೆ. ನಿಶ್ಪಕ್ಷಪಾತ ಪೊಲೀಸ್ ತನಿಖೆಯೇ ಉತ್ತರ ನೀಡಬೇಕಿದೆ.
ಕದ್ರಾ ಗ್ರಾಮ ಪಂಚಾಯಿತಿ ಸದಸ್ಯೆ ರೀನಾ ಡಿಸೋಜಾ ಅವರ ಪುತ್ರಿ ರೀಶೆಲ್ ಡಿಸೋಜಾ (20) ಜ. 9 ರಂದು ಮನೆಯಲ್ಲಿ ಯಾರೂ ಇಲ್ಲ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಯುವತಿ ಕಿವಿಗೆ ಇಯರ್ ಫೋನ್ ಹಾಕಿಕೊಂಡಿದ್ದಳು ಎನ್ನಲಾಗಿದೆ. ಆಕೆ ತನ್ನ ಪ್ರಿಯಕರನೊಂದಿಗೇ ಮಾತನಾಡುತ್ತಿದ್ದಳು. ಆತನೇ ಆಕೆಯ ಸಾವಿಗೆ ಕಾರಣನಾಗಿದ್ದಾನೆ. ಕಾರವಾರದ ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಅವರ ಪುತ್ರ ಚಿರಾಗ್ ಕೊಠಾರಕರ್ ಆಕೆಯ ಪ್ರೇಮಿಯಾಗಿದ್ದು, ಆತ ರೀಶೆಲ್‌ಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಆತನೇ ತನ್ನ ಮಗಳ ಸಾವಿಗೆ ಕಾರಣ ಎಂದು ರೀಶೆಲ್ ತಂದೆ ಕಿಸ್ತೋದ ಡಿಸೋಜಾ ಕದ್ರಾ ಠಾಣೆಗೆ ದೂರು ನೀಡಿದ್ದರು.
ಎರಡು ದಿನಗಳ ನಂತರ ಮೃತಳ ತಾಯಿ ರೀನಾ ಡಿಸೋಜಾ ಎಸ್‌ಪಿ, ಅವರಿಗೆ ಮತ್ತೊಂದು ದೂರು ನೀಡಿದ್ದು, ತನ್ನ ಮಗಳ ಸಾವಿಗೆ ಚಿರಾಗ್ ಕಾರಣ. ಆತ ರೀಶೆಲ್ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.