ಜೀವೋತ್ತಮ ವಿದ್ಯಾಪೀಠಂ ಆರಂಭ Jeevottam Vidyapeetham

ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಕೇಂದ್ರ ಮಠದಲ್ಲಿ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹೊಸ ವೇದಾಧ್ಯಯನ ಕೇಂದ್ರ ‘ಜೀವೋತ್ತಮ ವಿದ್ಯಾಪೀಠಂ’ ( Jeevottam Vidyapeetham)ಉದ್ಘಾಟನೆಗೊಂಡಿತು. ಮೋಹನದಾಸ ಪೈ, ಆರ್.ಎಸ್. ಶಾನುಭಾಗ, ಶ್ರೀನಿವಾಸ ವಿ. ದೆಂಪೋ, ರಾಮಚಂದ್ರ ಆರ್. ಕಾಮತ್, ಅನಿಲ ಪೈ, ದಿನೇಶ ಪೈ, ಯೋಗೀಶ ಕಾಮತ ಮತ್ತಿತರ ಗಣ್ಯರು ಇದ್ದರು.
ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಕೇಂದ್ರ ಮಠದಲ್ಲಿ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹೊಸ ವೇದಾಧ್ಯಯನ ಕೇಂದ್ರ ‘ಜೀವೋತ್ತಮ ವಿದ್ಯಾಪೀಠಂ’ ( Jeevottam Vidyapeetham)ಉದ್ಘಾಟನೆಗೊಂಡಿತು. ಮೋಹನದಾಸ ಪೈ, ಆರ್.ಎಸ್. ಶಾನುಭಾಗ, ಶ್ರೀನಿವಾಸ ವಿ. ದೆಂಪೋ, ರಾಮಚಂದ್ರ ಆರ್. ಕಾಮತ್, ಅನಿಲ ಪೈ, ದಿನೇಶ ಪೈ, ಯೋಗೀಶ ಕಾಮತ ಮತ್ತಿತರ ಗಣ್ಯರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರ್ತಗಾಳಿ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಸಾನ್ನಿಧ್ಯ
  • ವೇದಾಧ್ಯಯನಕ್ಕೆ ಅವಕಾಶ
  • 5 ಹಾಗೂ 10 ವರ್ಷಗಳ ಪಠ್ಯಕ್ರಮ
ಪರ್ತಗಾಳಿ: ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಕೇಂದ್ರ ಮಠದಲ್ಲಿ ಬುಧವಾರ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಹೊಸ ವೇದಾಧ್ಯಯನ ಕೇಂದ್ರ ‘ಜೀವೋತ್ತಮ ವಿದ್ಯಾಪೀಠಂ’ ( Jeevottam Vidyapeetham) ಉದ್ಘಾಟನೆಗೊಂಡಿತು.
ಸುಮಾರು 550 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಸಾಂಪ್ರದಾಯಿಕ ಗುರುಕುಲ ಪದ್ಧತಿಯ ಮೂಲಕ ವೇದ ಮತ್ತು ಶಾಸ್ತ್ರಗಳ ಅಧ್ಯಯನ ನಿರಂತರವಾಗಿ ನಡೆಯುತ್ತ ಬಂದಿದೆ.
1953ರಲ್ಲಿ ಶ್ರೀಮದ್ ದ್ವಾರಕಾನಾಥತೀರ್ಥ ಶ್ರೀಪಾದಂಗಳವರಿಂದ ಆರಂಭಗೊಂಡಿದ್ದ ಸಂಸ್ಕೃತ ಪಾಠಶಾಲೆಯನ್ನು ಬಳಿಕ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದರು ಪರ್ತಗಾಳಿಗೆ ಸ್ಥಳಾಂತರಿಸಿ ಜೀವೋತ್ತಮ ವೈದಿಕ ಸಂಸ್ಕೃತ ಪಾಠಶಾಲೆ ಎಂದು ನಾಮಕರಣ ಮಾಡಿದ್ದರು.
ಆದರೆ ಆಧುನಿಕ ಶಿಕ್ಷಣದ ಪ್ರಭಾವದಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದ ಪರಿಣಾಮ 2016ರ ವೇಳೆಗೆ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಇದೀಗ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರು ‘ಜೀವೋತ್ತಮ ವಿದ್ಯಾಪೀಠಂ’ ಹೆಸರಿನಲ್ಲಿ ಸಂಸ್ಥೆಯನ್ನು ಪುನಶ್ಚೇತನಗೊಳಿಸುವ ಮೂಲಕ ಹೊಸ ಚೈತನ್ಯ ತುಂಬಿದ್ದಾರೆ.
ವಿದ್ಯಾಪೀಠ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಐದು ವರ್ಷದ ಪಠ್ಯಕ್ರಮದಲ್ಲಿ ಸಂಸ್ಕೃತ, ವೇದ, ಕರ್ಮಾಂಗ ಮತ್ತು ಜ್ಯೋತಿಷ ವಿಷಯಗಳಿಗೆ ಆದ್ಯತೆ ನೀಡಲಾಗುತ್ತದೆ.
ಹತ್ತು ವರ್ಷದ ಪಠ್ಯಕ್ರಮದಲ್ಲಿ ಸಂಸ್ಕೃತ, ವೇದ, ಕರ್ಮಾಂಗ, ಜ್ಯೋತಿಷ್ಯ, ನ್ಯಾಯ, ವ್ಯಾಕರಣ ಮತ್ತು ವೇದಾಂತ ವಿಷಯಗಳ ಸಮಗ್ರ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ವಿದ್ಯಾಪೀಠದ ಸಂಸ್ಕೃತ ವಿಭಾಗಕ್ಕೆ ಗಣೇಶ್ ಭಟ್ ಗೋಕರ್ಣ ಹಾಗೂ ರಘೋತ್ತಮ ಆಚಾರ್ಯ ಬೆಂಗಳೂರು, ವೇದ ವಿಭಾಗಕ್ಕೆ ಅಥರ್ವ ಭಾಂಡೆಕರ್ ಮತ್ತು ಮುಖ್ಯೋಪಾಧ್ಯಾಯರಾಗಿ ಲಕ್ಷ್ಮೀಕಾಂತ ಭಟ್ ಅವರನ್ನು ನೇಮಕ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮೋಹನದಾಸ ಪೈ, ಆರ್.ಎಸ್. ಶಾನುಭಾಗ, ಶ್ರೀನಿವಾಸ ವಿ. ದೆಂಪೋ, ರಾಮಚಂದ್ರ ಆರ್. ಕಾಮತ್, ಅನಿಲ ಪೈ, ದಿನೇಶ ಪೈ, ಯೋಗೀಶ ಕಾಮತ ಸೇರಿದಂತೆ ವಿವಿಧ ಗಣ್ಯರು, ವೈದಿಕ ವೃಂದ, ಹಳೆಯ ವಿದ್ಯಾರ್ಥಿಗಳು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net