ಕಾರವಾರ: ಜೆಡಿಎಸ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಸೂರಜ್ ನಾಯ್ಕ ಸೋನಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಪಕ್ಷದ ಪದಾಧಿಕಾರಿಗಳಿಂದಲೇ ಆಕ್ಷೆಪ ಕೇಳಿ ಬಂದಿದೆ. ವಾರದಲ್ಲಿ ಸಮಸ್ಯೆ ಬಗೆಹರಿಯದಿದ್ದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಹಲವು ಪದಾಽಕಾರಿಗಳು ಎಚ್ಚರಿಸಿದ್ದಾರೆ.
ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ (ಪ್ರಭಾರ)ಜಿ.ಕೆ.ಪಟಗಾರ ಬುಧವಾರ ಸುದ್ದಿಗೋಷ್ಠಿ ನಡೆಸಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷದಲ್ಲಿ ಒಂದೂವರೆ ದಶಕಗಳಿಗೂ ಹೆಚ್ಚು ಕಾಲ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಜಿಲ್ಲಾಧ್ಯಕ್ಷರಾಗಿದ್ದ ಗಣಪಯ್ಯ ಗೌಡ ಅನಾರೋಗ್ಯಕ್ಕೆ ತುತ್ತಾದಾಗ ಜವಾಬ್ದಾರಿಯಿಂದ ಪಕ್ಷದ ಸಂಘಟನೆ ಮಾಡಿದ್ದೇನೆ.ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷ ಸಂಘಟನೆ ಮಾಡಿದ್ದರಿಂದ ಶಿರಸಿ, ಕುಮಟಾದಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿತ್ತು ಎಂದರು. ಪಕ್ಷದ ವಿವಿಧ ತಾಲೂಕು ಘಟಕದವರು ಸಹಕಾರ ನೀಡಿ, ನನ್ನೊಂದಿಗಿದ್ದರು. ಪರಿಣಾಮ ಪಕ್ಷದ ಸಾಂಸ್ಥಿಕ ಚುನಾವಣೆ ನಡೆದ ವೇಳೆ ನನ್ನ ಪರ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಕೊನೆಯಲ್ಲಿ ನಿರ್ಧಾರ ಬದಲಾಗಿರುವುದು ಅಚ್ಚರಿ ಹಾಗೂ ಬೇಸರ ತಂದಿದೆ. ಒಕ್ಕಲಿಗ ಸಮಾಜಕ್ಕೆ ಅನ್ಯಾಯವಾಗಿದೆ. ಪಕ್ಷದ ಈ ನಿರ್ಧಾರದ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಚುನಾವಣೆಯಲ್ಲಿ ಅಡ್ಡ ಪರಿಣಾಮ ಬೀರಬಹುದು ಎಂದರು.
ಪ್ರಾಥಮಿಕ ಸದಸ್ಯರೂ ಅಲ್ಲ:
ರಮೇಶ ನಾಯ್ಕ ಮಾತನಾಡಿ, ಡಿ.21ರಂದು ರಾಷ್ಟ್ರೀಯ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆದಾಗ ಜಿ.ಕೆ.ಪಟಗಾರ ಅವರನ್ನೇ ಜಿಲ್ಲಾಧ್ಯಕ್ಷ ಎಂದು ಪರಿಗಣಿಸಿ ಮತ ಚಲಾವಣೆಗೆ ಅವಕಾಶ ನೀಡಲಾಗಿತ್ತು. ಕನಿಷ್ಠ 25 ಸದಸ್ಯತ್ವ ನೋಂದಣಿ ಮಾಡಿಸಿದ್ದವರಿಗೆ ಜಿಲ್ಲಾ ಪದಾಽಕಾರಿ ಹುದ್ದೆಗೆ ಸ್ಪಽðಸಲು ಅವಕಾಶ ಇತ್ತು. ಆದರೆ, ಪಕ್ಷದ ಪ್ರಾಥಮಿಕ ಸದಸ್ಯರೂ ಅಲ್ಲದವರಿಗೆ ಈಗ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದು ಅಚ್ಚರಿ ಮೂಡಿಸಿದೆ ಎಂದರು. ಒಂದು ವಾರದ ಗಡುವು ನೀಡುತ್ತೇವೆ. ಸ್ಪಂದಿಸದೇ ಇದ್ದರೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದರು.
ಶಿರಸಿಯ ಶೇಖರ ಪೂಜಾರಿ ಮಾತನಾಡಿ, ಜಿ.ಕೆ.ಪಟಗಾರ ಅವರಂಥ ಹಿರಿಯರನ್ನು ಕಡೆಗಣಿಸಿ ವಾಮ ಮಾರ್ಗದಲ್ಲಿ ಬೇರೊಬ್ಬರನ್ನು ಹುದ್ದೆಗೆ ಆಯ್ಕೆ ಮಾಡಿದ್ದು, ಬೇಸರ ತಂದಿದೆ. ಶಿರಸಿಯಲ್ಲಿ ಉಪೇಂದ್ರ ಪೈ ಅವರೂ ಸಂಘಟನೆ ಕುಂದಿಸಿದ್ದಾರೆ ಎಂದರು.
ಸತೀಶ ಕುಮಾರ ಮಹಾಲೆ, ಗೋವಿಂದ ಗೌಡ, ಈಶ್ವರ ನಾಯ್ಕ, ಗಣೇಶ ನಾಯ್ಕ, ಶಂಕರ ನಾಯ್ಕ, ವಿನಾಯಕ ನಾಯ್ಕ, ಅನಿಲ ಗೌಡ, ರಾಜೇಶ ಪಟಗಾರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.