ಕಾರ್ಮಿಕ ಕಾಯ್ದೆ ಜಾರಿಗೆ ವಿರೋಧ

ಕಾರವಾರದಲ್ಲಿ ಕಾರ್ಮಿಕ ಸಂಘಟನೆಗಳು ಮುಷ್ಕರ ನಡೆಸಿದವು
ಕಾರವಾರದಲ್ಲಿ ಕಾರ್ಮಿಕ ಸಂಘಟನೆಗಳು ಮುಷ್ಕರ ನಡೆಸಿದವು
Published on
ಕಾರವಾರ: ಕೇಂದ್ರ ಸರ್ಕಾರ 29 ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿರುವುದನ್ನು ವಿರೋಧಿಸಿ ಎಡಪಂಥೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜೆಸಿಟಿಯು ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಹೆದ್ದಾರಿ 66 ರ ಕಾರವಾರದ ನಗರದ ಸರ್ವೀಸ್ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ತಡೆದರು. ನಂತರ ಜಿಲ್ಲಾಽಕಾರಿ ಕಚೇರಿಯ ಎದುರು ಪ್ರತಿಭಟನಾ ಮೆರವಣಿಗೆ ನಡೆಸಿ, ಅಪರ ಜಿಲ್ಲಾಽಕಾರಿ ಸಾಜೀದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಬ್ಯಾಂಕ್, ಬಿಎಸ್‌ಎನ್‌ಎಲ್, ಎಲ್‌ಐಸಿ, ಬಿಸಿಯೂಟ, ಅಂಗನವಾಡಿ, ಸ್ವಚ್ಛ ವಾಹಿನಿಯ ಕಾರ್ಮಿಕರು ಸೇರಿ ವಿವಿಧ ದುಡಿಯುವ ವರ್ಗದವರು ಪ್ರತಿಭಟನೆಯಲ್ಲಿದ್ದರು.
ಎಂಜಿಎನ್‌ಆರ್‌ಇಜಿಎ ಬದಲಾಗಿ ವಿಬಿ ರಾಮ್ ಜೀ ಕಾಯ್ದೆ ಜಾರಿ ಮಾಡಬಾರದು. ವಿಮಾ ಕ್ಷೇಥ್ರದಲ್ಲಿ ಶೇ.100 ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಬಾರದು. ಕೇಂದ್ರ ಸರ್ಕಾರದ ಕರಡು ಬೀಜ ಮಸೂದೆ, ಕರಡು ವಿದ್ಯುತ್ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಲಾಯಿತು.
ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ಬ್ಯಾಂಕ್ ನೌಕರರ ಸಂಘದ ವಾಸುದೇವ ಶೇಟ್, ಜೆಸಿಟಿಯು ಸಂಚಾಲಕಿ ಯಮುನಾ ಗಾಂವಕರ್, ವೀರೇಶ ರಾಠೋಡ, ಭರತ್ ಮಾತನಾಡಿದರು. ಸಿಐಟಿಯುನ ತಾರಾ ನಾಯ್ಕ, ಜಯಶ್ರೀ ಗೌಡ, ಮಾಯಾ ಕಾಣೇಕರ್, ಪೂರ್ಣಿಮಾ ನಾಯಕ, ಮೀನಾ, ಸುಮಂಗಲಾ ಮಡಿವಾಳ, ಸನ್ನಿ ನಾಯ್ಕ, ಸಂದೀಪ ಹುಳಗೇಕರ್, ದೀಪಾ ರಮಾಕಾಂತ ನಾಯ್ಕ, ಶ್ರೀರಕ್ಷಾ ನಾಯ್ಕ, ಸಮೀರ ಶೇಖ್, ಗಜಾನನ ನಾಯ್ಕ ವಿನೋದ ಬಾಂದೇಕರ್, ನರೇಶ ಅಂಕೋಲೆಕರ್, ಯಲ್ಲಪ್ಪ, ಶಶಿಧರ ಕಾನಡೆ, ಮಲ್ಲಿಕಾರ್ಜುನ, ಶೇಖಪ್ಪ, ಲಲಿತಾ ಗುನಗಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net