Jackfruit ಶಿರಸಿಯಲ್ಲಿ ಹಲಸಿನ ಮೇಳ 27ರಿಂದ

ಹಲಸಿನ Jackfruit ಸಾಂದರ್ಭಿಕ ಚಿತ್ರ.
ಹಲಸಿನ Jackfruit ಸಾಂದರ್ಭಿಕ ಚಿತ್ರ.
Published on
ಶಿರಸಿ: ಮಲೆನಾಡಿನ ಕೃಷಿಯೊಂದಿಗೆ ಹಾಸು ಹೊಕ್ಕಾಗಿರುವ, ನಿರ್ಲಕ್ಷಿತ ಹಲಸಿನ ಬೆಳೆಗೆ ಉತ್ತೇಜನ ನೀಡಿ, ಹಲಸಿನ ಉತ್ಪನ್ನಗಳನ್ನು ಮೌಲ್ಯವರ್ಧನೆ ಮೂಲಕ ಮಾರುಕಟ್ಟೆ ಒದಗಿಸುವ ಉದ್ದೇಶದೊಂದಿಗೆ ನಗರದ ಕದಂಬ ಮಾರ್ಕೆಟಿಂಗ್ ಪ್ರತಿವರ್ಷ ಹಲಸಿನ ಮೇಳವನ್ನು Jackfruit ಆಯೋಜಿಸುತ್ತಿದೆ. ಪ್ರಸಕ್ತ 13ನೇ ವರ್ಷದ ಹಲಸಿನ ಮೇಳವನ್ನು ಜೂ. 27ಮತ್ತು 28ರಂದು ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಲ್ಲಿಯ ಮಹಿಳೆಯರು ಹಲಸಿನ ಚಿಪ್ಸ್, ಹಪ್ಪಳದಂತಹ ಉತ್ಪನ್ನಗಳನ್ನು ಸಿದ್ಧಪಡಿಸುತ್ತಾರಾದರೂ ವಾಣಿಜ್ಯ ಉದ್ದೇಶದೊಂದಿಗೆ ಉತ್ಪಾದಿಸುವರು ಕಡಿಮೆ. ಹೀಗಾಗಿ, ಹಲಸಿನ ಬೆಳೆ ಬಳಕೆಗಿಂತ ಹಾಳಾಗುವ ಪ್ರಮಾಣವೇ ಜಾಸ್ತಿ ಇದೆ. ಹಲಸಿನ ಉತ್ಪನ್ನಗಳನ್ನು ತಯಾರಿಸಲು ಉತ್ತೇಜನ ಹಾಗೂ ಮಾರುಕಟ್ಟೆ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ಹಲಸಿನ ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜೂ. 27ರ ಬೆಳಗ್ಗೆ 10.30ಕ್ಕೆ ಶಾಸಕ ಭೀಮಣ್ಣ ನಾಯ್ಕ ಹಲಸಿನ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ ಸಸಿ, ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಅಶೀಸರ, ಡಿಎ್ಒ ಡಾ. ಸಂದೀಪ ಸೋರ್ಯವಂಶಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಸತೀಶ ಬಿ.ಪಿ., ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಶಿವಪ್ರಸಾದ ಗಾಂವಕರ್, ವನಸಿ ಟ್ರಸ್ಟ್ ನ ಶೈಲಜಾ ಗೋರನಮನೆ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಹಾಗೂ ನಿರ್ವಹಣಾ ಸಂಸ್ಥೆಯ ಅಸೋಸಿಯೇಟ್ ಪ್ರೊೆಸರ್ ಡಾ. ಚಿದಾನಂದ ಡಿ.ವಿ. ವಿಶೇಷ ಮಾಹಿತಿ ನೀಡಲಿದ್ದಾರೆ ಎಂದರು.
ಹಲಸಿನ ಸಂಸ್ಕರಣೆ, ಮೌಲ್ಯವರ್ಧನೆ, ಮಲೆನಾಡಿನ ಕೃಷಿ ಹಾಗೂ ಆಹಾರ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಹಲಸಿನ ಉತ್ಪನ್ನದ ಗುಣಮಟ್ಟ ಮತ್ತು ಮಾರುಕಟ್ಟೆ ಸಾಧ್ಯತೆಗಳ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ.
ಅರಣ್ಯ ಇಲಾಖೆ ಸಹಯೋಗದೊಂದಿಗೆ ಹಲಸಿನ ವೃಕ್ಷಾರೋಪಣ ಕಾರ್ಯಕ್ರಮ ನಡೆಯಲಿದೆ. ಗೋಷ್ಠಿಗಳಲ್ಲಿ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡಾ. ಕಾಂತರಾಜ, ಹಾವೇರಿ ಜಿಲ್ಲೆ ದೇವಿಹೊಸೂರಿನ ವಿಜ್ಞಾನಿ ಡಾ. ತಿಪ್ಪಣ್ಣ ಕೆ. ಎಸ್., ಉದ್ಯಮಿ ಭಾರದ್ವಾಜ ಕಾರಂತ, ಮಮತಾ ವಿನಾಯಕ ಭಟ್ ಸೇರಿದಂತೆ ಹಲವು ತಜ್ಞರು ಭಾಗವಿಸಿ ಮಾಹಿತಿ ನೀಡಲಿದ್ದಾರೆ ಎಂದರು.
ಮೇಳದಲ್ಲಿ ವಿವಿಧ ಹಲಸಿನ ತಳಿಗಳ, ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಹಲಸಿನ ಸಂಸ್ಕರಣೆ ಹಾಗೂ ಬ್ರಾಂಡಿಂಗ್, ಮಾರುಕಟ್ಟೆ ಕುರಿತ ಮಾಹಿತಿ, ರೈತ ಸಾಧಕರ ಅನುಭವ ಹಂಚಿಕೆ, ಗಿಡಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಗುವುದು ಎಂದರು.
ವ್ಯವಸ್ಥಾಪಕ ವಿಶ್ವೇಶ್ವರ ಭಟ್, ರಾಜೇಂದ್ರ ಹೆಗಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net