ಪಡಿತರದಾರರಿಗೆ ಮಹತ್ವದ ಸೂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರೇಶನ್‌ ಅಂಗಡಿಗಳಿಗೆ ತಲುಪಿದ ಇ ಕೆವೈಸಿ ಲಿಸ್ಟ್‌
ಕಾರವಾರ: ಜಿಲ್ಲೆಯ 5.37 ಲಕ್ಷ ಪಡಿತರದಾರರು ಇ-ಕೆವೈಸಿ ಮಾಡಿಸಬೇಕು ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ 15,820 ಅಂತ್ಯೋದಯ ಪಡಿತರ ಚೀಟಿಗಳಿದ್ದು, ಅದರಲ್ಲಿ 65,129 ಫಲಾನುಭವಿಗಳಿದ್ದಾರೆ. 2,88,895 ಆದ್ಯತಾ ಪಡಿತರ ಚೀಟಿ(ಬಿಪಿಎಲ್)ಗಳಿವೆ. ಅದರಲ್ಲಿ 10,41,208 ಫಲಾನುಭವಿಗಳಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 3,04,715 ಪಡಿತರ ಚೀಟಿಗಳಿದ್ದು, 11,06,337 ಫಲಾನುಭವಿಗಳಿದ್ದಾರೆ.
ಅವುಗಳಲ್ಲಿ 31,053 ಎಎವೈ ಮತ್ತು 5,37,991 ಪಿಎಚ್‌ಎಚ್ ಫಲಾನುಭವಿಗಳು ಸೇರಿದಂತೆ ಒಟ್ಟು 5,69,044 ಫಲಾನುಭವಿಗಳ ಇ-ಕೆವೈಸಿಯನ್ನು ಪುನಃ ಮಾಡಬೇಕಾಗುತ್ತದೆ. ಇ-ಕೆವೈಸಿ ಫಲಾನುಭವಿಗಳ ಯಾದಿಯನ್ನು ಪಡಿತರ ಚೀಟಿ ಹೊಂದಿರುವ ನ್ಯಾಯಬೆಲೆ ಅಂಗಡಿಗಳಿಗೆ ನೀಡಿದ್ದು ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ತಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ, ಅಹಾರ ನಿರೀಕ್ಷಕರನ್ನು ಅಥವಾ ಕಾರವಾರದ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net