ಈ ಎಲ್ಲದರ ಬಗ್ಗೆ ದೂರು ನೀಡಿದರೆ, ಅಽಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ. ಮೇಲಾಗಿ ದೂರು ನೀಡಿದವರ ಮೇಲೆಯೇ ಕಿರುಕುಳ ನೀಡುತ್ತಿದ್ದಾರೆ. ಸ್ಥಳೀಯರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅಲೆಸುವ ಕೆಲಸವಾಗುತ್ತಿದೆ. ಈ ಎಲ್ಲದರ ಬಗ್ಗೆ ವಿಡಿಯೋ ಸಹಿತ ದಾಖಲೆಗಳಿದ್ದರೂ, ಹೈಕೋರ್ಟ್ ಸ್ಪಷ್ಟ ಸೂಚನೆಯನ್ನು ಜಿಲ್ಲಾಽಕಾರಿಗಳಿಗೆ ನೀಡಿದರೂ ಕ್ರಮ ವಹಿಸದೇ ಇರುವುದು ಅಚ್ಚರಿಯಾಗಿದೆ ಎಂದರು. ಗ್ರಾಮಸ್ಥರಾದ ಶಿವರಾಮ ದೇಸಾಯಿ, ಕುಮಾರ ಬಾಮಣಗಿ, ಸಂದೀಪ ನಾಯ್ಕ, ಪರಶುರಾಮ ಮೊರಸ್ಕರ್, ರಾಜಕುಮಾರ ಗಾಂವಕರ್ ಹಾಗೂ ಇತರರು ಇದ್ದರು.