ಕಾರವಾರ: ಗಣಿ ಇಲಾಖೆ ಹಿರಿಯ ಭೂ ವಿಜ್ಞಾನ ಆಶಾ ಎಂ.ಎಸ್.ಅವರ ನೇತೃತ್ವದಲ್ಲಿ ಹೊನ್ನಾವರದಲ್ಲಿ ಭಾರಿ ಪ್ರಮಾಣದ ಅಕ್ರಮ ಮರಳನ್ನು ವಶಕ್ಕೆ ಪಡೆಯಲಾಗಿದೆ.
ಹೊನ್ನಾವರ ಬಳಕೂರು ವ್ಯಾಪ್ತಿಯಲ್ಲಿ ಶರಾವತಿ ನದಿಯಿಂದ ತೆಗೆದು ಸಂಗ್ರಹಿಸಿಟ್ಟಿದ್ದ 236 ಮೆಟ್ರಿಕ್ ಟನ್ ಎಂದರೆ ಸುಮಾರು 20 ಲೋಡ್ ಮರಳನ್ನು ವಶಕ್ಕೆ ಪಡೆದು, ಅದರನ್ನು ತೆಗೆದವರಿಂದ 7.2 ಲಕ್ಷ ರೂ. ದಂಡವನ್ನು ಆಕರಿಸಲಾಗಿದೆ ಎಂದು ಗಣಿ ಇಲಾಖೆ ಪ್ರಕಟಣೆ ತಿಳಿಸಿದೆ.