ಇಶಾನ್ 1.50 ಲಕ್ಷದ ಐಫೋನ್‌ನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ. ಓಪನ್ ಬಾಕ್ಸ್ ಡಿಲೆವರಿ ಇತ್ತು. ಅದನ್ನು ಡಿಲೆವರಿ ಮಾಡಲು ಬಂದ ತನ್ನ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿ, ಅದೇ ರೀತಿಯ ಮತ್ತೊಂದು ಐಫೋನ್‌ನ್ನು ಬಾಕ್ಸ್ನಲ್ಲಿ ಇರಿಸಿ ಮೋಸ ಮಾಡಿದ್ದ. ಫೋನ್ ಓಪನ್ ಮಾಡಿ ತೋರಿಸುವಂತೆ ಹೇಳಿ, ಅದರ ಸಿಮ್ ಟ್ರೇ ಮುರಿದಿದೆ ಎಂದು ತಿಳಿಸಿ, ಆರ್ಡರ್ ಕ್ಯಾನ್ಸಲ್ ಮಾಡಿದ್ದ. ಐಫೋನ್‌ನ್ನು ಇಂಟರ್‌ನ್ಯಾಷನಲ್ ವ್ಯಾಲ್ಯೂ ರೀಟೇಲ್ ಎಂಬ ಕಂಪನಿ ಮಾರಾಟ ಮಾಡಿದ್ದು, ಕಂಪನಿ ಕಳಿಸಿದ ಐಫೋನ್ ಹಾಗೂ ವಾಪಸಾದ ಮೊಬೈಲ್‌ನ ಐಎಂಇಐ ಸಂಖ್ಯೆ ಬೇರೆ ಇರುವುದು ಪತ್ತೆಯಾಗಿದೆ. ಇಶಾನ್ ತಮಗೆ ಹಾಗೂ ಕಂಪನಿಗೆ ಮೋಸ ಮಾಡಿದ್ದಾನೆ ಎಂದು ಜಿತೇಶ ನಾಯ್ಕ ದೂರಿನಲ್ಲಿ ತಿಳಿಸಿದ್ದಾನೆ.