ಸೇವಾಕಾರ್ಯಗಳಿಂದ ಮಾನವೀಯತೆ ಗಟ್ಟಿ

ಭಟ್ಕಳದಲ್ಲಿ ಮಾಧವ ಹನುಮಂತ ಶ್ಯಾನಭಾಗ ಕುಟುಂಬದ ಪರವಾಗಿ ಶ್ರೀರಂಗ ಶ್ಯಾನಭಾಗ ಅವರು ಔಷಧಿಗಳನ್ನು ಸರ್ಕಾರಿ ತಾಲೂಕು ಆಸ್ಪತ್ರೆಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಡಾ. ಸವಿತಾ ಕಾಮತ, ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ವೈದ್ಯರಾದ ಡಾ. ಸತೀಶ ಕುಮಾರ, ಡಾ. ಸುರಕ್ಷಿತ ಶೆಟ್ಟಿ, ಡಾ. ಪ್ರಕಾಶ ನಾಯ್ಕ ಇತರರಿದ್ದರು.

Published on
ಭಟ್ಕಳ: ಶ್ರೀ ಸಂಸ್ಥಾನ ಪರ್ತಗಾಳಿ ಮಠದ ಸಾರ್ಧಪಂಚಶತಮಾನೋತ್ಸವದ ಅಂಗವಾಗಿ ಹಾಗೂ ಭಟ್ಕಳದ ನಿವಾಸಿ, ಪ್ರಸ್ತುತ ಯುಎಸ್‌ಎನಲ್ಲಿ ನೆಲೆಸಿರುವ ಮಾಧವ ಹನುಮಂತ ಶ್ಯಾನಭಾಗ ಅವರ 80ನೇ ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ ಭಟ್ಕಳ ಸರ್ಕಾರಿ ತಾಲೂಕು ಆಸ್ಪತ್ರೆಗೆ ಔಷಧಗಳನ್ನು ದೇಣಿಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸವಿತಾ ಕಾಮತ ಅವರು, ನಾವು ನಮ್ಮ ಮೂಲ ಸಂಸ್ಕೃತಿ, ಗುರುತನ್ನು ಉಳಿಸಿಕೊಂಡು ಸಮಾಜಕ್ಕೆ ಕೈಲಾದಷ್ಟು ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಮಾನವೀಯತೆಯನ್ನು ಗಟ್ಟಿಗೊಳಿಸುತ್ತವೆ ಎಂದರು.
ಶ್ರೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣಕುಮಾರ, ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ವೈದ್ಯರಾದ ಡಾ. ಸತೀಶ ಕುಮಾರ, ಡಾ. ಸುರಕ್ಷಿತ ಶೆಟ್ಟಿ, ಡಾ. ಪ್ರಕಾಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನರೇಂದ್ರ ನಾಯಕ ವಂದನಾರ್ಪಣೆ ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net