ಕುಡ್ಲೆ ಬೀಚ್‌ನಲ್ಲಿ ಹೊಟೆಲ್ ಉದ್ಯಮ ನಡೆಸುತ್ತಿದ್ದ ಮುರಳೀಧರ ಭಾಸ್ಕರ ಕಾಮತ್ ಅವರ ಮನೆಯಾಗಿದ್ದು, ಅವಘಡದ ವೇಳೆ ಯಾರೂ ಮನೆಯಲ್ಲಿ ಇರದೆ ಎಲ್ಲರೂ ಕುಡ್ಲೆ ಬೀಚ್‌ನಲ್ಲಿ ಉಳಿದುಕೊಂಡಿದ್ದ ಕಾರಣ ಯಾವುದೇ ಜೀವ ಹಾನಿಯಾಗಿಲ್ಲ. ಕುಮಟಾದಿಂದ ಆಗಮಿಸಿದ ಅಗ್ನಿ ಶಾಮಕ ತಂಡ ಬೆಂಕಿ ಆರಿಸಿತು. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ 11 ಲಕ್ಷ ರೂ. ಹಾನಿಯಾಗಿರಬಹುದೆಂದು ಅಂದಾಜಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.