ಬಾಲಕಿಯ ಸಂಬಂಧಿಯೋರ್ವನೇ ಆಕೆಯ ಈ ಸ್ಥಿತಿಗೆ ಕಾರಣನಾಗಿದ್ದಾನೆ ಎನ್ನಲಾಗಿದೆ. 7 ತಿಂಗಳ ಗರ್ಭಿಣಿಯಾಗಿದ್ದ ಈ ಬಾಲಕಿ ಶುಕ್ರವಾರ ಶೌಚಗೃಹಕ್ಕೆ ತೆರಳಿದ್ದ ವೇಳೆ ಗರ್ಭಪಾತವಾಗಿದೆ. ಆತಂಕಗೊAಡ ಬಾಲಕಿ ಶಿಶುವನ್ನು ಶೌಚಗೃಹದ ಕಿಟಕಿಯಿಂದ ಹೊರಗೆಸೆದಿದ್ದಾಳೆ. ಹಾಸ್ಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಈ ಮೃತ ಮಗು ಸಿಕ್ಕಿದ್ದು, ವಿಷಯ ಹೊರಬಂದಿದೆ. ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಸಾದ ಆಲದಕಟ್ಟೆ, "ಬಂಡಲದ ಹಾಸ್ಟೇಲ್ ಬಾಲಕಿಯರ ಹಾಸ್ಟೇಲ್ ಆಗಿದ್ದು, ಕಟ್ಟು ನಿಟ್ಟಿನ ಕಾವಲು ಹೊಂದಿದೆ. ಬಾಲಕಿ ರಜೆಯಲ್ಲಿ ಮನೆಗೆ ತೆರಳಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಇದೆ . ಪೊಲೀಸ್ ದೂರು ನೀಡಲಾಗಿದ್ದು ತನಿಖೆಯಿಂದ ವಿಷಯ ಹೊರಬರಬೇಕಿದೆ" ಎಂದಿದ್ದಾರೆ.