ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಲ್ಲಿನ ಜನತೆಯ ಆರೋಗ್ಯ ತಪಾಸಣೆಗೆ ಅತ್ಯಗತ್ಯವಾದ ಎಂಆರ್ ಐ ಯಂತ್ರ ಇಲ್ಲ. ಎಂಆರ್ ಐ ಪರೀಕ್ಷೆಗೆ ಜನತೆ 200-250 ಕಿ.ಮೀ.ದೂರ ಹೋಗಬೇಕಾಗಿದೆ. ಹೃದ್ರೋಗ ತಜ್ಞರು, ನರ ರೋಗ ತಜ್ಞರು ಹೀಗೆ ತಜ್ಞ ವೈದ್ಯರು ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಒಂದೇ ಒಂದು ಉಪಕರಣ, ತಜ್ಞ ವೈದ್ಯರನ್ನು ಕೊಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಿಗೈಯಲ್ಲಿ ಉದ್ಘಾಟನೆ ಮಾಡಲು ಬಂದರು ತೀವ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.