ಅಡಿಕೆ ಲಾರಿ ಪರಿಶೀಲನೆ ಪ್ರಕರಣ ಸುಖಾಂತ್ಯದ ಆಶಾಭಾವ

ಅಡಿಕೆ ಲಾರಿಗಳನ್ನು ತಡೆಹಿಡಿದಿರುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನಿಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ಡ್ನವಿಸ್​ ಅವರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿದರು. ಅರಗ ಜ್ಞಾನೇಂದ್ರ, ಬ್ರಿಜೇಶ್​ ಚೌಟ, ಬಿ.ವೈ. ರಾವೇಂದ್ರ ಇತರರಿದ್ದರು.
ಅಡಿಕೆ ಲಾರಿಗಳನ್ನು ತಡೆಹಿಡಿದಿರುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನಿಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ಡ್ನವಿಸ್​ ಅವರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿದರು. ಅರಗ ಜ್ಞಾನೇಂದ್ರ, ಬ್ರಿಜೇಶ್​ ಚೌಟ, ಬಿ.ವೈ. ರಾವೇಂದ್ರ ಇತರರಿದ್ದರು.
Published on
ಶಿರಸಿ: ಉತ್ತರ ಭಾರತಕ್ಕೆ ಸಾಗಾಟ ಮಾಡಲಾಗುತ್ತಿದ್ದ ಜಿಲ್ಲೆಯ ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಹಿಡಿದು ನಿಲ್ಲಿಸುವ ಪ್ರಕರಣ ಸುಖಾಂತ್ಯಗೊಳ್ಳುವ ಆಶಾಭಾವ ವ್ಯಕ್ತಗೊಂಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದ ನಿಯೋಗ ದೆಹಲಿಯಲ್ಲಿ ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್​ ಅವರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ.
ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಅಡಿಕೆ ಬೆಳೆಯನ್ನು ಮಹಾರಾಷ್ಟ್ರ ಮೂಲಕ ಉತ್ತರ ಪ್ರದೇಶ, ಗುಜರಾತ್​, ಮಧ್ಯ ಪ್ರದೇಶ ರಾಜಸ್ತಾನ ಇನ್ನಿತರ ರಾಷ್ಟ್ರಗಳಿಗೆ ಕಳಿಸಿಕೊಡಲಾಗುತ್ತಿದೆ. ಆದರೆ, ಕಳೆದ 10 ದಿನಗಳ ಹಿಂದೆ ಮಹಾರಾಷ್ಟ್ರದ ಗಡಿಗಳಲ್ಲಿಯೇ ಈ ಲಾರಿಗಳ ಸಾಗಾಟಕ್ಕೆ ಅಲ್ಲಿಯ ಅಧಿಕಾರಿಗಳು ತಡೆ ಒಡ್ಡಿ ಅಡಿಕೆಗಳ ಸುರತೆಯ ಬಗ್ಗೆ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸುವ ಬಗ್ಗೆ ಕಾರಣ ನೀಡಿದ್ದರು. ಹೀಗಾಗಿ, ರಾಜ್ಯದ 60ಕ್ಕೂ ಅಧಿಕ ಲಾರಿಗಳು ಮಹಾರಾಷ್ಟ್ರದ ವಿವಿಧ ತನಿಖಾ ಠಾಣೆಗಳಲ್ಲಿ ನಿಲ್ಲುವಂತಾಗಿತ್ತು. ಬಳಿಕ ರಾಜ್ಯದಿಂದ ಅಡಿಕೆ ಲಾರಿಗಳ ಸಾಗಾಟವೇ ಸ್ಥಗಿತಗೊಂಡಿದೆ. ಇದರ ಪರಿಣಾಮ ರಾಜ್ಯದ ಅಡಿಕೆ ಮಾರುಕಟ್ಟೆಯ ಮೇಲಾಗಿದ್ದು, ರಾಶಿ ಅಡಿಕೆ, ಚಾಲಿ ಅಡಿಕೆ ಸೇರಿದಂತೆ ದರ ಪ್ರತಿ ಕ್ವಿಂಟಾಲ್​ಗೆ ಎರಡರಿಂದ ಮೂರು ಸಾವಿರ ರೂ.ವರೆಗೂ ಇಳಿಕೆಯಾಗಿದೆ. ವ್ಯಾಪಾರಸ್ಥರೂ ಸಹ ಅಡಿಕೆ ಖರೀದಿಗೆ ಹಿಂದೇಟು ಹಾಕುತ್ತಿದ್ದುದು ಒಂದೆಡೆಯಾದರೆ, ರೈತರೂ ಸಹ ಸಿದ್ಧಗೊಂಡ ಅಡಿಕೆಯನ್ನು ಮಾರುಕಟ್ಟೆಗೆ ತರಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದರು.
ಪರಿಸ್ಥಿತಿ ಸರಿಪಡಿಸಲು ಈಗಾಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಡ್ನವಿಸ್​ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ದೇವೇಂದ್ರ ಡ್ನವಿಸ್​ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿತ್ತಾದರೂ ಹಿಡಿದಿಡಲಾಗಿದ್ದ ಲಾರಿಗಳಿಗೆ ಮುಂದೆ ಸಾಗಲು ಅನುಮತಿ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ದೇವೇಂದ್ರ ಡ್ನವಿಸ್​ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಾಸಕರು ಹಾಗೂ ಅಡಿಕೆ ಟಾಸ್ಕ್​ಫೋರ್ಸ್​ ಅಧ್ಯ ಅರಗ ಜ್ಞಾನೇಂದ್ರ, ಸಂಸದ ಕ್ಯಾಪ್ಟನ್​ ಬ್ರಿಜೇಶ್​ ಚೌಟ, ಬಿ.ವೈ. ರಾವೇಂದ್ರ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಸಹಕಾರಿ ಸಂಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಿಷಯದ ಗಂಭೀರತೆಯನ್ನು ಮನಗಂಡ ಪಡ್ನವಿಸ್​, ಮುಂಬರುವ ದಿನಗಳಲ್ಲಿ ಸೂಕ್ತ ದಾಖಲೆಗಳಿರುವ ಅಡಿಕೆ ಸಾಗಣೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಭೆಗೆ ಭರವಸೆ ನೀಡಿದರು. ಈ ಕುರಿತು ಮಾಹಿತಿ ನೀಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ನಮ್ಮ ಅಡಿಕೆ ಬೆಳೆಗಾರರ ಹಿತಾಸಕ್ತಿಯ ರಣೆಗಾಗಿ ನಮ್ಮ ಪ್ರಯತ್ನಗಳು ನಿರಂತರವಾಗಿ ಮುಂದುವರಿಯಲಿವೆ ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net