ಹಿರೇಗುತ್ತಿ ಪಿಎಚ್‌ಸಿ ಮೇಲ್ದರ್ಜೆಗೇರಿಸಲಿ PHC

PHC ಪಿಎಚ್‌ಸಿ ಮೇಲ್ದರ್ಜೆಗೇರಿಸಬೇಕು ಎಂದು ಕುಮಟಾದಲ್ಲಿ ಗೋಕರ್ಣ ಬಳಿಯ ಹಿರೇಗುತ್ತಿ ಗ್ರಾಮಸ್ಥರು ಮಂಗಳವಾರ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು. ಸಾಯಿ ಗಾಂವಕರ, ರಾಜೀವ ಗಾಂವಕರ, ರಾಮು ಕೆಂಚನ್, ಉದ್ದಂಡ ಗಾಂವಕರ, ಪ್ರದೀಪ ನಾಯಕ, ಇತರರಿದ್ದರು
PHC ಪಿಎಚ್‌ಸಿ ಮೇಲ್ದರ್ಜೆಗೇರಿಸಬೇಕು ಎಂದು ಕುಮಟಾದಲ್ಲಿ ಗೋಕರ್ಣ ಬಳಿಯ ಹಿರೇಗುತ್ತಿ ಗ್ರಾಮಸ್ಥರು ಮಂಗಳವಾರ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು. ಸಾಯಿ ಗಾಂವಕರ, ರಾಜೀವ ಗಾಂವಕರ, ರಾಮು ಕೆಂಚನ್, ಉದ್ದಂಡ ಗಾಂವಕರ, ಪ್ರದೀಪ ನಾಯಕ, ಇತರರಿದ್ದರು
Published on
ಗೋಕರ್ಣ: ಹತ್ತಿರದ ಹಿರೇಗುತ್ತಿ ಗ್ರಾಮಸ್ಥರ ವತಿಯಿಂದ ಮಂಗಳವಾರ ಕುಮಟಾಕ್ಕೆ ಆಗಮಿಸಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಹಿರೇಗುತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (PHC) ಮೇಲ್ದರ್ಜೆಗೇರಿಸುವಂತೆ ಮನವಿ ಸಲ್ಲಿಸಲಾಯಿತು.
ಈ ಪಿಎಚ್‌ಸಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಹೆದ್ದಾರಿ ಮೇಲಿನ ಅಪಘಾತ ಇನ್ನಿತರ ಸಂದರ್ಭಗಳಲ್ಲಿ ತಕ್ಷಣ ತುರ್ತು ಚಿಕಿತ್ಸೆ ನೀಡಲು ಅತ್ಯಂತ ಉಪಯೋಗಕಾರಿಯಾಗಿದೆ.
ಇದರೊಂದಿಗೆ ಸುತ್ತಲಿನ ಹಲವಾರು ಸಣ್ಣ ಸಣ್ಣ ಗ್ರಾಮಗಳ ಜನತೆ ಆರೋಗ್ಯ ಚಿಕಿತ್ಸೆಗೆ ದೂರದ ಅಂಕೋಲಾ, ಕುಮಟಾ ಮತ್ತಿತರ ಕಡೆಗಳಿಗೆ ಅಲೆಯುವ ಕಷ್ಟವನ್ನು ನೀಗಿಸಲು ಸಾಧ್ಯವಿರುವ ನಿಮಿತ್ತ ಹಿರೇಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಅಗತ್ಯವನ್ನು ಸಚಿವರಿಗೆ ಮನಗಾಣಿಸಲಾಯಿತು.
ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಜತೆ ಚರ್ಚಿಸಿ ಆದಷ್ಟು ಬೇಗ ಹೆಚ್ಚಿನ ಮತ್ತು ಸುಲಭ ಆರೋಗ್ಯ ಸೇವೆ ಲಭಿಸುವ ಪ್ರಯತ್ನ ಮಾಡುವ ಆಶ್ವಾಸನೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಹಿರೇಗುತ್ತಿ ಆಶ್ರಯ ಪ್ರತಿಷ್ಠಾನ ಅಧ್ಯಕ್ಷ ರಾಜೀವ ಗಾಂವಕರ, ರಾಮು ಕೆಂಚನ್, ಕಾಂಗ್ರೆಸ್ ಪ್ರಮುಖ ಪ್ರದೀಪ ನಾಯಕ, ಉದ್ದಂಡ ಗಾಂವಕರ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net